ಬೆಳಗಾವಿ: ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಚರ್ಚೆ ವಿಚಾರಕ್ಕೆ ಬೆಳಗಾವಿಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಪ್ರತಿಕ್ರಿಯೆ ನೀಡಿದ ಅವರು, ನಾನು ಯಾರು ಪರ ಇಲ್ಲ, ಯಾರ ವಿರೋಧವೂ ಇಲ್ಲ. ಸದ್ಯಕ್ಕೆ ಡಿಸಿಎಂ ಸ್ಥಾನ ಖಾಲಿ ಇಲ್ಲ ಖಾಲಿ ಇದ್ದಾಗ ನೋಡ್ತಾರೆ ಎಂದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ ಕಾಂಗ್ರೆಸ್.ವೈಯಕ್ತಿಕವಾಗಿ ಕೆಲವರು ಮಾತಾಡಿದ್ದಾರೆ. ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಜವಾಬ್ದಾರಿ ಅಧ್ಯಕ್ಷರು, ಮುಖ್ಯಮಂತ್ರಿ ಇದ್ದಾರೆ ಅವರು ನೋಡಿಕೊಳ್ತಾರೆ. ಡಿಸಿಎಂ ಚರ್ಚೆ ವಿಚಾರದ ಕುರಿತು ನಾನು ಮಾತಾಡಲ್ಲ ಎಂದು ಹೇಳಿದರು.
Advertisement
Advertisement
ಚನ್ನಪಟ್ಟಣದಲ್ಲಿ ಡಿ.ಕೆ ಶಿವಕುಮಾರ್ ವಾಸ್ತವ್ಯ ವಿಚಾರಕ್ಕೆ, ಅವರು ಅಧ್ಯಕ್ಷರು ನೋಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣಕ್ಕೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಡಿಕೆಶಿ ಅಥವಾ ಡಿಕೆ ಸುರೇಶ್ ಯಾರು ಅಂತಾ ತೀರ್ಮಾನ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಕುಳಿತು ಚರ್ಚೆ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಗಳಿಗೆ ಜಮೀನು ಕೊಡುವುದಾಗಿ ಹೇಳಿದ್ದಕ್ಕೆ ತಾಯಿಯ ಹತ್ಯೆ – ಆರೋಪಿ ಅರೆಸ್ಟ್
Advertisement
ಮಂಡ್ಯದಲ್ಲಿ (Mandya) ನನ್ನ ಸೋಲಿಸಲು ಯತ್ನಿಸಿದ್ರು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮನ್ನ ಸೋಲಿಸಲು ನೋಡಿದ್ರೂ ಆಗ ಜನ ಗೆಲ್ಲಿಸಿದ್ರು. ನಾನು ಜೆಡಿಎಸ್ ನಲ್ಲಿ ಇಲ್ಲಾ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಕೆಲಸ ಮಾಡಲಿ ಒಂದು ವರ್ಷ ಏನೂ ಮಾತಾಡಲ್ಲ ಎಂದರು.
Advertisement
ಕುಮಾರಸ್ವಾಮಿ (HD Kumaraswamy) ಹೊಸದಾಗಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ತಂದೆ ಮಾಡಲು ಆಗದ್ದನ್ನ ಕೆಲಸ ಮಾಡ್ತೀನಿ ಅಂತಾ ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದ್ರೇ ನಾನು ಹೆಚ್ಚು ಖುಷಿಪಡುತ್ತೇನೆ. ಈಗ ಕುಮಾರಸ್ವಾಮಿ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ. ದೇವೆಗೌಡರ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಮಾತಾಡಿಲ್ಲ. ಕೋರ್ಟ್ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ಕುಮಾರಸ್ವಾಮಿ ಅವರು ಡಿವೈಡ್ ಆಗಿದ್ದೇವೆ ಅಂತಾ ಹೇಳ್ತಿದ್ದಾರೆ. ಆದರೆ ಹೀಗಾಗಬಾರದಿತ್ತು ಅದನ್ನ ಕಾನೂನು ನೋಡುತ್ತದೆ ಎಂದರು.