ಯಾದಗಿರಿ: ಸರ್ಕಾರ ರಂಗಭೂಮಿ ಕಲಾವಿದರಿಗೆ ಯಾವುದೇ ಅನುದಾನ ನೀಡಿಲ್ಲ ಎಂದು ನಟ ಮಂಡ್ಯ ರಮೇಶ್ ಹೇಳಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವೋಟ್ ಬ್ಯಾಂಕಿಂಗ್ ಅಲ್ಲ. ಹಾಗಾಗಿ ಸರ್ಕಾರದಿಂದ ನಮಗೆ ಯಾವುದೇ ಸಹಾಯ ಇಲ್ಲ. ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ
Advertisement
Advertisement
Advertisement
ಕೊರೊನಾ ಲಾಕ್‍ಡೌನ್ ವೇಳೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದೇವೆ. ರಂಗಭೂಮಿಯಲ್ಲಿ ಎಲ್ಲ ಜನಾಂಗದವರು ಇದ್ದೇವೆ. ಎಲ್ಲಾ ಧರ್ಮದವರು ಇದ್ದೇವೆ, ಎಲ್ಲಾ ಲಿಂಗದವರು ಇದ್ದೇವೆ. ಆದರೂ ಸರ್ಕಾರ ಕಲಾವಿದರ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ನಾವು ವೋಟ್ ಬ್ಯಾಂಕಿಂಗ್ ಆಗಿದ್ದರೆ, ನಮಗೂ ಸರ್ಕಾರ ಅನುದಾನ ಕೊಡುತ್ತಿತ್ತು ಅನಿಸುತ್ತದೆ. ಸರ್ಕಾರ ಹೆಚ್ಚು, ಹೆಚ್ಚು ಅನುದಾನವನ್ನು ನಾಟಕ ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್
Advertisement