– ಯುಗಾದಿ ವರೆಗೂ ಸರ್ಕಾರ ಏನೂ ಬದಲಾವಣೆ ಆಗಲ್ಲ ಎಂದ ಸ್ವಾಮೀಜಿ
ಬೀದರ್: ರಾಜ್ಯದ ರಾಜಕೀಯದಲ್ಲಿ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಬದಲಾವಣೆ ಆಗಲ್ಲ. ಯುಗಾದಿವರೆಗೂ ಸರ್ಕಾರ ಏನೂ ಬದಲಾವಣೆ ಆಗೋದಿಲ್ಲ ಎಂದು ಬೀದರ್‌ನಲ್ಲಿ ಕೋಡಿಮಠದ (Kodi Mutt) ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಸ್ಫೋಟಕ ಭವಿಷ್ಯ ನುಡಿದ್ದಾರೆ.
ಸಿಎಂ ಬದಲಾವಣೆ ಅನ್ನೋದು ಊಹಾಪೋಹ ಅಷ್ಟೇ. ಸಂಕ್ರಾಂತಿ ಫಲದಲ್ಲಿ ಸಿಎಂ ಬದಲಾವಣೆ ಇಲ್ಲ. ಅವರಾಗಿಯೇ ಬಿಟ್ಟುಕೊಟ್ಟರೆ ಬೇರೆಯವರು ಸಿಎಂ ಆಗಬಹುದು. ಆದರೆ, ಸಿಎಂ ಸಿದ್ದರಾಮಯ್ಯ ಬದಲಾವಣೆ ಯಾರ ಕೈಯಲ್ಲೂ ಮಾಡೋಕೆ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: JDS ಪಾರ್ಟಿಯನ್ನೇ ಮಾರಾಟಕ್ಕಿಟ್ಟಿದ್ದಾರೆ – ಪ್ರಿಯಾಂಕ್ ಖರ್ಗೆ ಲೇವಡಿ

ಅವರು ಬಿಟ್ಟು ಕೊಡಲ್ಲ, ಇಳಿಯೋದು ಇಲ್ಲ. ಯುಗಾದಿ ಕಳೆದ ಮೇಲೆ ಸಿಎಂ ಬದಲಾವಣೆ ಬಗ್ಗೆ ಹೇಳ್ತೇನೆ. ಸಿಎಂ ಆಗಬೇಕಿರುವ ಡಿ.ಕೆ.ಶಿವಕುಮಾರ್ ನಮಗೆ ಬೇಕಾದವರು. ಆದರೆ, ಸಿಎಂ ರೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್ ಸೇರಿದಂತೆ ಇನ್ನೂ ಹಲವರು ಇದ್ದಾರೆ. ದಿವ್ಯ ಯೋಗ ಯಾರಿಗೆ ಇದೆಯೋ ಅವರು ಸಿಎಂ ಆಗುತ್ತಾರೆ. ಆದರೆ, ಸಿಎಂ ಅವರನ್ನು ಸದ್ಯಕ್ಕೆ ಇಳಿಸೋದು ಕಷ್ಟ ಎಂದ ಶ್ರೀಗಳು ಹೇಳಿದ್ದಾರೆ.
2026 ರಲ್ಲಿ ಜಗತ್ತಿನಲ್ಲಿ ದೊಡ್ಡ ಯುದ್ಧ ಮತ್ತು ಗದ್ದಲ್ಲವಾಗುವ ಲಕ್ಷಣ ಇದೆ. ಯದ್ಧವಿಲ್ಲದೆ ಬಡಿಯೇ ಯುದ್ಧವೆಲ್ಲಾ ಕೂಳಾದಿತ್ತು ಎಂದು ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದ್ದಾರೆ. ದೇಶಕ್ಕೆ ಅಪಾಯ ಇದೆ. ಸಾವು-ನೋವಾಗುವ ಲಕ್ಷಣ ಇದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವು-ನೋವು ಜಾಸ್ತಿಯಾಗುತ್ತದೆ. ಪ್ರಪಂಚ 60% ರಷ್ಟು ನಾಶವಾಗೋದು ಖಚಿತ ಎಂದು ಬೀದರ್‌ನಲ್ಲಿ ಕೋಡಿಮಠದ ಶಿವಾನಂದ ಸ್ವಾಮೀಜಿಗಳು ಭವಿಷ್ಯ ನುಡಿದ್ದಾರೆ. ಇದನ್ನೂ ಓದಿ: ಮಾರ್ಚ್ 6 ರಂದು ರಾಜ್ಯ ಬಜೆಟ್ ಮಂಡನೆಗೆ ಚಿಂತನೆ

