– ಯಾರೋ ಇಬ್ಬರು ಮಾತನಾಡಿದರೆ ದೊಡ್ಡದಲ್ಲ
ಬೆಂಗಳೂರು: ಎಐಸಿಸಿ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಉಸ್ತುವಾರಿ ಸುರ್ಜೇವಾಲಾ ಅವರೇ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ಚರ್ಚೆ ಯಾಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.
ನಾನೇ 5 ವರ್ಷ ಸಿಎಂ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿ ಅಭಿಪ್ರಾಯ ಸಂಗ್ರಹವೇ ಮಾಡಿಲ್ಲ. ಯಾರೋ ಇಬ್ಬರು ಮಾತನಾಡಿದ್ದರೆ ಅದೇನು ದೊಡ್ಡದಲ್ಲ ಅಂತ ಹೇಳಿದ್ದಾರೆ. ನಾಯಕತ್ವದ ಬದಲಾವಣೆ ಅಭಿಪ್ರಾಯವೇ ತೆಗೆದುಕೊಳ್ಳದೇ ಇರುವಾಗ ಸಂಖ್ಯಾಬಲದ ಚರ್ಚೆ ಎಲ್ಲಿ ಬರುತ್ತದೆ ಎಂದು ಕೇಳಿದರು. ಇದನ್ನೂ ಓದಿ: 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ರೂ ಡಿಕೆಶಿ ಭೇಟಿಗೆ ಅವಕಾಶ ನೀಡದ ರಾಹುಲ್!
ನಾನು, ಡಿಕೆ ಶಿವಕುಮಾರ್ (DK Shivakumar) ಹೈಕಮಾಂಡ್ ಏನ್ ಹೇಳುತ್ತದೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಅಂತ ಹೇಳಿದ್ದಾರೆ. ಹೈಕಮಾಂಡ್ ಸ್ಪಷ್ಟವಾಗಿ ನಾಯಕತ್ವದ ಬಗ್ಗೆ ಹೇಳಿದ ಮೇಲೆ ಎಲ್ಲವೂ ಮುಗಿಯಿತು ಎಂದು ಸ್ಪಷ್ಟಪಡಿಸಿದರು.
ದೆಹಲಿಗೆ ಹೋಗಬಾರದು, ಹೈಕಮಾಂಡ್ ಗೆ ಭೇಟಿಯಾಗಬಾರದು ಅಂದರೆ ಹೇಗೆ? ನವೆಂಬರ್ ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ, ಡಿಸೆಂಬರ್ ಶಾಂತಿ ಎನ್ನುವುದು ವಿಷಯವೇ ಅಲ್ಲ. ಮಾಧ್ಯಮಗಳ ಮುಂದೆ ಪಕ್ಷದ ವಿಚಾರ ಹೇಳಿದರೆ ತೀರ್ಮಾನ ಆಗುವುದಿಲ್ಲ. ಮಾಧ್ಯಮಗಳು ಕೇಳೋದು ನಿಲ್ಲಿಸಿ ಸರಿ ಆಗುತ್ತೆ. ಮಾಧ್ಯಮಗಳು ಎರಡು ದಿನ ಪ್ರವಾಸಕ್ಕೆ ಹೋಗಿ ಬನ್ನಿ ನಾಳೆಯೇ ಶಾಂತಿ ಆಗುತ್ತದೆ ಅಂತ ಮಾಧ್ಯಮಗಳ ಮೇಲೆ ಅರೋಪ ಮಾಡಿದರು.
ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಡಿಕೆ ಶಿವಕುಮಾರ್ 40 ವರ್ಷ ಪಕ್ಷಕ್ಕೆ ದುಡಿದ್ದಾರೆ. ಇಂದಲ್ಲ ನಾಳೆ ಸಿಎಂ ಆಗ್ತಾರೆ ಅಂತ ಹೇಳಿದ್ದಾರೆ. ಯಾವಾಗ ಅವಕಾಶ ಸಿಗುತ್ತೋ ಮಾಡೋಣ ಅಂತ ಹೇಳಿದ್ದಾರೆ. ಎಲ್ಲಾ ಕಡೆ ಹೀಗೆ ಬರುತ್ತದೆ. ಇದೇ ಎಲ್ಲರ ತೀರ್ಮಾನ ಅಲ್ಲ. ಯಾರ ಮುಂದೆ ಹೇಳಬೇಕೋ ಅವರ ಮುಂದೆ ಹೇಳಬೇಕು ಅಂತ ಕ್ರಾಂತಿ ಬಗ್ಗೆ, ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಿಎಂ ಉತ್ತರ ಕೊಟ್ಮೇಲೆ ಎಲ್ಲಾ ಮುಗೀತು; ದೆಹಲಿಯಿಂದ ವಾಪಸ್ಸಾದ ಡಿಕೆಶಿ ಫಸ್ಟ್ ರಿಯಾಕ್ಷನ್
ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿ ಕುರಿತು ಮಾತನಾಡಿದ ಅವರು, ಇಡಿ, ಐಟಿ, ಸಿಬಿಐ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆ ಆಗಿವೆ.10 ವರ್ಷಗಳಿಂದ ಅವರು ನಡೆಸಿರೋ ರೇಡ್ ತಗೊಳ್ಳಿ. ಸಂಸತ್ ನಲ್ಲಿ ಅವರ ಬಿಜೆಪಿ ಎಂಪಿ ಕೇಳಿರೋದಕ್ಕೆ ಉತ್ತರ ಕೊಟ್ಟಿದ್ದಾರೆ. ಇಷ್ಟು ರೇಡ್ ಮಾಡಿ 1.2% ಮಾತ್ರ ಕೇಸ್ ಬುಕ್ ಮಾಡಿದ್ದಾರೆ. ಐಟಿ, ಇಡಿಯನ್ನು ಇವರು ಪೊಲಿಟಿಕಲ್ ಟೂಲ್ ಆಗಿ ಬಳಸಿ ವಿಪಕ್ಷ ನಾಯಕರ ಮೇಲೆ ಬಳಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.