ಕಲಬುರಗಿ: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಅವರ ಮಾತು ಸತ್ಯಕ್ಕೆ ಅತ್ಯಂತ ದೂರವಾಗಿದ್ದು, ಆರ್‌ಎಸ್‌ಎಸ್ (RSS) ಜಾತ್ಯತೀತ ಹಾಗೂ ಸರ್ವಹಿತ ಕಾಪಾಡುವ ಸಂಘಟನೆಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೆಲ್ಕೂರ್ (Rajkumar Patil Telkur) ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಆರ್‌ಎಸ್‌ಎಸ್ ಅಥವಾ ಸಂಘ ಪರಿವಾರದ ಯಾವುದೇ ಕಚೇರಿಯಲ್ಲಿ ಜಾತಿ, ವರ್ಗ ಕೇಳಿ ಒಳಬಿಡುವ ಪದ್ಧತಿಯಿಲ್ಲ. ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದೇನೆ. ಅವರ ಆರೋಪ ಶುದ್ಧ ಸುಳ್ಳು ಮತ್ತು ರಾಜಕೀಯ ದುರುದ್ದೇಶ ಎನಿಸುತ್ತದೆ ಎಂದರು. ಇದನ್ನೂ ಓದಿ: ಹಲ್ಲೆ ಪ್ರಕರಣ ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಯತ್ನ – ಸುಳ್ಳು ಕೇಸ್‌ಗಳಿಗೆ ನಾವು ಭಯಪಡಲ್ಲ: ಮಣಿಕಂಠ್ ರಾಠೋಡ್
Advertisement
Advertisement
ನಾನು ಆರ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿ ದಿಸೆಯಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮೆರೆಯುವ ಸಂಘದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಗೂಳಿಹಟ್ಟಿಯವರು ಒಂದೆರಡು ಬೈಠಕ್‌ನಲ್ಲಿ ಭಾಗಿಯಾದರೆ ಆರ್‌ಎಸ್‌ಎಸ್ ಎಂತಹ ದೇಶಭಕ್ತ ಸಂಘಟನೆ ಎಂದು ಅವರಿಗೆ ತಿಳಿಯಲಿದ್ದು, ಬರುವುದಾದರೆ ಮುಕ್ತ ಅವಕಾಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ
Advertisement
Advertisement
ಸುಳ್ಳು ಹೇಳುವುದು, ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿಯಿಂದ ಗೂಳಿಹಟ್ಟಿ ಸೇರಿದಂತೆ ಉಳಿದ ನಾಯಕರು ಹೊರ ಬರಬೇಕು. ಪುರಾವೆ, ದಾಖಲೆಗಳು ಇದ್ದಲ್ಲಿ ಮಾತನಾಡಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಾಯಕರು ತೋರಿದ ಅಗೌರವ ಏನು ಎನ್ನುವುದು ದೇಶದ ಜನತೆಗೆ ಗೊತ್ತಿದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ (Congress) ಮತ್ತು ಅವರು ನಿಧನರಾದ ಸಂದರ್ಭದಲ್ಲಿ ಕಾಂಗ್ರೆಸ್ ತೋರಿದ ಅಗೌರವ. ಇದು ಕಾಂಗ್ರೆಸ್ ಬಾಬಾ ಸಾಹೇಬರನ್ನು ಕಂಡ ರೀತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ