ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ, ಟೆಸ್ಟ್ ರಿಪೋರ್ಟ್ ಸೇಫ್ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊಟ್ಟೆಯನ್ನು ಸಂಗ್ರಹಿಸಿ, ಲ್ಯಾಬ್‌ಗೆ ರವಾನೆ ಮಾಡಲಾಗಿತ್ತು. ಇದೀಗ ವರದಿ ಬಂದಿದ್ದು, ಮೊಟ್ಟೆಯಲ್ಲಿ ಯಾವುದೇ ಕ್ಯಾನ್ಸರ್‌ಕಾರಕ ಅಂಶವಿಲ್ಲ. ಮೊಟ್ಟೆ ಸೇಫ್ ಇದೆ, ಸೇವನೆ ಮಾಡಬಹುದು. ಯಾವುದೇ ಸಮಸ್ಯೆ ಇಲ್ಲ ಅಂತ ಎಫ್‌ಎಸ್‌ಎಸ್‌ಎಐ ಹೇಳಿದೆ, ಸುಮ್ಮನೇ ಆತಂಕ ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: Chitradurga Bus Accident | ಸಜೀವ ದಹನಗೊಂಡ ನವ್ಯಾ ಮನೆಯಲ್ಲಿ ಮಡುಗಟ್ಟಿದ ಶೋಕ
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸೇವೆ ಕಡಿತ ವಿಚಾರವಾಗಿ ಮಾತನಾಡಿ, ಎಲ್ಲೆಲ್ಲಿ ಕಡಿಮೆ ರೋಗಿಗಳು ಬರುತ್ತಾರೆ, ಅಲ್ಲಿನ ವೈದ್ಯರನ್ನು ಶಿಫ್ಟ್ ಮಾಡುತ್ತೇವೆ. ಸ್ಪೆಷಲಿಸ್ಟ್‌ಗಳನ್ನು ಶಿಫ್ಟ್ ಮಾಡಿ, ಇಬ್ಬರು ಎಂಬಿಬಿಎಸ್ ವೈದ್ಯರನ್ನ ಹಾಕುತ್ತೇವೆ. ಯಾವ ಸಮುದಾಯ ಕೇಂದ್ರಗಳನ್ನು ಮುಚ್ಚಲ್ಲ. ಸ್ಪೆಷಲಿಸ್ಟ್ ವೈದ್ಯರನ್ನ ಶಿಫ್ಟ್ ಮಾಡಿದ ಬಳಿಕ ಇಬ್ಬರು ಎಂಬಿಬಿಎಸ್ ಡಾಕ್ಟರ್ ಅನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹಾಕುತ್ತೇವೆ. ಸಮುದಾಯ ಕೇಂದ್ರಗಳು 24 ಗಂಟೆ ಸೇವೆ ನೀಡುತ್ತವೆ ಎಂದು ಸ್ಪಷ್ಟನೆ ನೀಡಿದ್ದಾರೆ.

