ಬೆಂಗಳೂರು: ನನ್ನ ಇಲಾಖೆಯಲ್ಲಿ ಯಾವುದೇ ಲಂಚ ಕೊಡುಕೊಳ್ಳುವಿಕೆ ನಡೆಯುದಿಲ್ಲ. ಯಾವುದಾದರು ಅಂತಹ ಪ್ರಕರಣ ಇದ್ದರೆ ಹೇಳಿ, ಅವರಿಗೆ ಬಲಿ ಹಾಕುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಹೇಮಾವತಿ ಮತ್ತು ಯಗಚಿ ನೀರಾವರಿ ಯೋಜನೆಯ ಸಭೆ ಬಳಿಕ ಮಾತನಾಡಿದ ಸಚಿವರು, ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ಲಂಚ ಪ್ರಕ್ರಿಯೆ ನಡೆದಿಲ್ಲ. ಒಂದು ವೇಳೆ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement
ಪಾಂಡವಪುರ, ಕೆ.ಆರ್.ಪೇಟೆ ನಾಗಮಂಗಲ ನಾಲೆಗಳಿಗೆ ನೀರು ಬಿಡಲು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಜುಲೈ 30 ರೊಳಗೆ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ ಎಂದರು.
Advertisement
ತಮ್ಮ ಮನೆ ನವೀಕರಣ ವಿಚಾರಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವುದೇ ವಾಸ್ತುವಿಗಾಗಿ ಮನೆ ನವೀಕರಣ ಮಾಡಿಲ್ಲ. ನಾನು ಹೊಲದಲ್ಲಿ ಮಲಗುವುದಕ್ಕೂ ಸಿದ್ಧ. ನಾವೇನು ಫೈಸ್ಟಾರ್ ಹೋಟೆಲ್‍ನಲ್ಲಿ ಇರಬೇಕು ಅಂತಾ ಇಲ್ಲ ಎಂದು ಹೇಳಿದರು.