ಬೆಂಗಳೂರು: ಹೆಸರು ಬದಲಾವಣೆ ಬಿಟ್ಟು ಇನ್ನೇನು ಅನುಕೂಲ ಇಂಡಿಯಾ (INDIA) ಸಭೆಯಿಂದ ಆಗಿಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (Kumaraswamy) ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಗೆ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯುಪಿಎ (UPA) ಮೈತ್ರಿಕೂಟಕ್ಕೆ ಇಂಡಿಯಾ ಎಂಬ ನಾಮಕರಣ ಮಾಡಿರುವ ಬಗ್ಗೆ ನಾನು ಯಾಕೆ ಹಗುರವಾಗಿ ಮಾತನಾಡಲಿ. ನಿನ್ನೆ ದಿನ ಯುಪಿಎ ಬದಲಾವಣೆ ಮಾಡಿಕೊಂಡು ಇಂಡಿಯಾ ಅಂತ ಇಟ್ಟಿದ್ದಾರೆ. ಅದು ಅವರಿಗೆ ಸೇರಿದ್ದು, ಹೆಸರು ಇಟ್ಟ ತಕ್ಷಣ ನಾಡಿನ ಸಮಸ್ಯೆ ಬಗೆಹರಿಯಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗುತ್ತಿದೆ: ಬೊಮ್ಮಾಯಿ
Advertisement
Advertisement
ಕಾಂಗ್ರೆಸ್ (Congress) ಇಷ್ಟು ದೊಡ್ಡ ಮಟ್ಟದಲ್ಲಿ ರಾಜಕೀಯ ಸಭೆ ಮಾಡಿ ಜನರ ಮೇಲೆ ಹೊರೆ ಹೊರಿಸಿ ಮಾಡಿರುವ ಕಾರ್ಯಕ್ರಮ ಇದು. ಕೊನೆಗೆ ಏನು ಸಂದೇಶ ನೀಡಿದ್ದಾರೆ. ನಾವು ಕಾಂಗ್ರೆಸ್ ನವರು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಅಂತ ಹೇಳಿದ್ದಾರೆ. ಅದು ಬಿಟ್ಟು ಇನ್ನೇನು ಆಗಿಲ್ಲ ವ್ಯಂಗ್ಯವಾಡಿದರು.
Advertisement
ಸಂವಿಧಾನದ ಪ್ರಕಾರ ಇಂಡಿಯಾ ಎಂಬ ಹೆಸರು ಇಡುವಂತಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಯಾರಾದರೂ ಕೋರ್ಟ್ ಹೋಗ್ತಾರಾ ಏನು ಮಾಡ್ತಾರೆ ಮುಂದೆ ನೋಡೋಣ. ಅವರು ಏನೋ ಹೆಸರು ಇಟ್ಟುಕೊಂಡಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ ಎಂದರು.
Advertisement
Web Stories