– ಸಿಎಂ ಹೇಳಿಕೆ ಬೆನ್ನಲ್ಲೇ ಜಾತಿಗಣತಿ ವಿರುದ್ಧ ವಾರ್ ಶುರು ಮಾಡಿದ ಒಕ್ಕಲಿಗರ ಸಂಘ
ಬೆಂಗಳೂರು: ಒಕ್ಕಲಿಗರನ್ನು ಎದುರು ಹಾಕಿಕೊಂಡರೆ ಎಷ್ಟು ಸರ್ಕಾರ ಬಿದ್ದಿದೆ ಎಂಬ ಇತಿಹಾಸವಿದೆ. ಇಲ್ಲಿದಿದ್ದರೆ ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಡಿಸಿಎಂ ಡಿಕೆಶಿ ಬೆಂಬಲಿಗ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ (Kenchappa Gowda) ಎಚ್ಚರಿಕೆ ನೀಡಿದ್ದಾರೆ.
Advertisement
ಸಿಎಂ ಸಿದ್ದರಾಮಯ್ಯ ಜಾತಿಗಣತಿಗೆ ವರದಿ ಹಾಗೂ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಕುರಿತು ನೀಡಿದ ಹೇಳಿಕೆ ಬೆನ್ನಲ್ಲೇ ಜಾತಿಗಣತಿ ವಿರುದ್ಧ ಒಕ್ಕಲಿಗ ಸಂಘ ವಾರ್ ಶುರು ಮಾಡಿದೆ.ಇದನ್ನೂ ಓದಿ: ‘ಪುಷ್ಪ 2’ ವಿವಾದದ ನಡುವೆ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್
Advertisement
Advertisement
ನಗರದಲ್ಲಿ ಒಕ್ಕಲಿಗ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವೂ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಹತ್ತು ವರ್ಷ ಆಗಿದೆ. ಜಾತಿಗಣತಿಗೆ ವರದಿ ಹಾಗೂ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ. ಇವರು ಮನೆ ಮನೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಜಾತಿಗಣತಿ ಸಮೀಕ್ಷೆ ಲೋಪದೋಷದಿಂದ ಕೂಡಿದೆ. 5 ಕೋಟಿ 98 ಲಕ್ಷ ಜನ ಇದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಆದರೆ ಈಗ 7 ಕೋಟಿ ಜನಸಂಖ್ಯೆ ಇದೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. 114 ಉಪಪಂಗಡಗಳು ನಮ್ಮಲ್ಲಿದೆ. ಆದರೆ ಇವುಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಜ.12 ರಂದು ಭಾನುವಾರ 12 ಗಂಟೆಗೆ ಬೆಂಗಳೂರು ಕಿಮ್ಸ್ ಆವರಣದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಸಮುದಾಯದ ಎಲ್ಲಾ ಶಾಸಕರು ಹಾಗೂ ಸಚಿವರ ಸಭೆ ನಡೆಯಲಿದೆ. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಂಜಾವದೂತ ಸ್ವಾಮೀಜಿ ಕೂಡ ಭಾಗಿಯಾಗಲಿದ್ದಾರೆ. ಒಕ್ಕಲಿಗ ಸ್ವಾಮೀಜಿ, ಎಲ್ಲಾ ರಾಜಕೀಯ ಮುಖಂಡರು ಸೇರಿ ಸಭೆ ನಡೆಸಲಿದ್ದೇವೆ ಎಂದರು.
ವೀರಶೈವ ಮಹಾಸಭಾ ಕೂಡ ಒಟ್ಟಿಗೆ ಇದೆ. ಅವರ ಜೊತೆಯೂ ನಾವು ಮಾತಾನಾಡಿದ್ದೇವೆ. ಒಟ್ಟಾಗಿ ಹೋರಾಟ ಮಾಡುತ್ತೇವೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗಬೇಕು. ಆದರೆ ಈ ಸಮೀಕ್ಷೆ ನಡೆದು ಈಗ ಹತ್ತು ವರ್ಷ ಆಗಿದೆ. ಇದು ಕಾನೂನುಬಾಹಿರ. ಸಭೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ಕೂಡ ಭಾಗಿಯಾಗಲಿದ್ದಾರೆ. ನಮ್ಮ ನಾಯಕರು ಚಕಾರವೆತ್ತುತ್ತಿಲ್ಲ ಹೀಗಾಗಿ ಒಕ್ಕಲಿಗ ನಾಯಕರು ಪ್ರಶ್ನೆ ಮಾಡಬೇಕು ಎಂಬ ಕಾರಣಕ್ಕೆ ಸಭೆ ಕರೆದಿದ್ದೇವೆ. ವೀರಶೈವ ಮುಖಂಡರು, ಸ್ವಾಮೀಜಿ ಜೊತೆ ಕೂಡ ಮಾತಾನಾಡಿ, ಶೀಘ್ರದಲ್ಲಿಯೇ ಜಂಟಿ ಸಭೆಯನ್ನು ಕರೆಯಲಿದ್ದೇವೆ ಎಂದರು.
ಜಾತಿಗಣತಿ ಬಗ್ಗೆ ಸಿಎಂ ಪಟ್ಟು ಹಿಡಿದಿರಬಹುದು ಆದರೆ ನಮ್ಮ ನಾಯಕರ ಧ್ವನಿಯೂ ಮಂಕಾಗಿಲ್ಲ. ನಿರ್ಮಲಾನಂದ ಸ್ವಾಮೀಜಿ ಮುಖಂಡತ್ವದಲ್ಲಿ ಜ.12 ರಂದು ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ಡಿಸಿಎಂ ಡಿಕೆಶಿ, ಆರ್.ಅಶೋಕ್ ,ಅಶ್ಚಥ್ ನಾರಾಯಣ್ ಸೇರಿದಂತೆ ಎಲ್ಲಾ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡ್ತೀವಿ, ಇಳಿಸ್ತೀವಿ ಅಂದ್ರೆ ನಡೆಯಲ್ಲ: ರಾಜಣ್ಣ ಗುಡುಗು