ತಿರುವನಂತಪುರಂ: ಮುಸ್ಲಿಮರು ನಡೆಸುವ ರೆಸ್ಟೋರೆಂಟ್‌ಗಳಲ್ಲಿ ನೀಡುವ ಪಾನೀಯಗಳಲ್ಲಿ ದುರ್ಬಲಕಾರಕ ಔಷಧಿ ಅಂಶಗಳಿರುತ್ತವೆ ಎಂದ ಕೇರಳದ ಹಿರಿಯ ರಾಜಕಾರಣಿ ಹಾಗೂ ಕಾಂಗ್ರೆಸ್ ಮಾಜಿ ನಾಯಕ ಪಿ.ಸಿ.ಜಾರ್ಜ್ ವಿರುದ್ಧ ದ್ವೇಷ ಭಾಷಣ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಜಾರ್ಜ್ ಮುಸ್ಲಿಮೇತರ ಪ್ರದೇಶಗಳಲ್ಲಿ ಮುಸಲ್ಮಾನರು ಇತರ ಸಮುದಾಯದ ಜನರಿಂದ ಹಣ ಗಳಿಸಲು ವ್ಯಾಪಾರವನ್ನು ಮಾಡುತ್ತಾರೆ. ಅಂತಹ ವ್ಯಾಪಾರವನ್ನು ಜನರು ಬಹಿಷ್ಕರಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಶನಿವಾರ ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Advertisement
Advertisement
ದೇಶಾದ್ಯಂತ ಹಿಂದೂ, ಮುಸ್ಲಿಂ ವಿಚಾರವಾಗಿ ವಿವಾದಗಳು ಭುಗಿಲೇಳುತ್ತಲೇ ಇವೆ. ಕೆಲವು ದಿನಗಳ ಹಿಂದೆ ಮುಸ್ಲಿಮರು ಸಾಂಪ್ರದಾಯಿಕವಾಗಿ ಮಾಂಸವನ್ನು ಕತ್ತರಿಸುವ ಬಗ್ಗೆ ವಿವಾದ ಎದ್ದಿತ್ತು. ಇದರ ಬೆನ್ನಲ್ಲೇ ಕೇರಳದಲ್ಲಿ ಮುಸ್ಲಿಮರ ಉಪಾಹಾರ ಗೃಹಗಳಲ್ಲಿ ಮಾರಾಟವಾಗುವ ಪಾನೀಯಗಳಲ್ಲಿ ದುರ್ಬಲತೆಗೆ ಕಾರಣವಾಗುವ ಅಂಶವಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
Advertisement
ಜಾರ್ಜ್ ಹೇಳಿಕೆ ಏನು?
ಶುಕ್ರವಾರ ಜಾರ್ಜ್ ಸಂಘ ಪರಿವಾರದ ಆಶ್ರಯದಲ್ಲಿ ನಡೆದ ಅನಂತಪುರಿ ಹಿಂದೂ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುವಾಗ, ಮುಸ್ಲಿಮರು ನಡೆಸುವ ಉಪಾಹಾರಗೃಹಗಳಿಗೆ ಹೋಗುವುದನ್ನು ನಾವು ಆದಷ್ಟು ತಪ್ಪಿಸಬೇಕು. ಅವರು ತಯಾರಿಸುವ ತಿನಿಸುಗಳಲ್ಲಿ ದೌರ್ಬಲ್ಯವನ್ನು ಉಂಟುಮಾಡುವ ಅಂಶವನ್ನು ಬಳಸುತ್ತಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಕಾರು, ಮೋಟಾರ್ ಬೈಕ್ ಡಿಕ್ಕಿ – ಝೊಮ್ಯಾಟೋ ಡೆಲಿವರಿ ಬಾಯ್, ಇಬ್ಬರು ಯುವತಿಯರು ಸಾವು
Advertisement
ಈ ಹಿಂದೆ ಭುಗಿಲೆದ್ದ ಆಹಾರ ಪದ್ಧತಿ ಬಗ್ಗೆ ಕಿಡಿಕಾರಿದ ಜಾರ್ಜ್, ಮುಸ್ಲಿಮರು ಸಮಾರಂಭಗಳಲ್ಲಿ ಆಹಾರ ತಯಾರಿಸುವಾಗ ಅದರ ಮೇಲೆ 3 ಬಾರಿ ಉಗುಳುತ್ತಾರೆ. ಅವರ ಉಗುಳನ್ನು ನಾವೇಕೆ ತಿನ್ನಬೇಕು? ಅವರು ಉಗುಳಿದ ಆಹಾರ ಪವಿತ್ರ ಎಂದು ಹೇಳುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದರು.
ಭಾರತದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಹಿಂಜರಿಯುತ್ತಾರೆ. ಆದರೆ ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಜನ ಸಂಖ್ಯೆಯಲ್ಲಿ ಬಲಿಷ್ಠರಾಗುವಂತೆ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಅವರ ಗುರಿ. ಹೀಗಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಕನಿಷ್ಟ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದಿದ್ದರು. ಇದನ್ನೂ ಓದಿ: ಪತಿ ಇನ್ನೊಬ್ಬಳನ್ನು ಮನೆಗೆ ಕರೆತರಲು ಯಾವ ಮುಸ್ಲಿಂ ಮಹಿಳೆಯೂ ಬಯಸಲ್ಲ: ಅಸ್ಸಾಂ ಸಿಎಂ
ಜಾರ್ಜ್ ಹೇಳಿಕೆಗೆ ತಿರುಗಿ ಬಿದ್ದ ಸಿಪಿಐ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು, ಅವರ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಇಂತಹ ಬೆಂಕಿ ಹೊತ್ತಿಸುವ ಭಾಷಣಗಳನ್ನು ಮಾಡಿರುವುದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.