ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ (Telangana Congress) ಭಾರೀ ಮುನ್ನಡೆ ಸಾಧಿಸಿದ್ದು, ಬಹುತೇಕ ಅಧಿಕಾರಕ್ಕೆ ಬಂದಂತಿದೆ. ಕಾಂಗ್ರೆಸ್ ನಾಯಕರು ಸಹ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ಹೊರಹಾಕಿದ್ದಾರೆ.
#WATCH | Hyderabad, Telangana: Congress MP Uttam Kumar Reddy says, “Congress will form the government. There is a special place for the Gandhi family in the hearts of the Telangana people. We made a mistake in the 2014 and 2018 elections. This time, we corrected ourselves, and we… pic.twitter.com/HKSsxScnjh
— ANI (@ANI) December 3, 2023
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ತೆಲಂಗಾಣ ಕಾಂಗ್ರೆಸ್ ಸಂಸದ ಉತ್ತಮ್ ಕುಮಾರ್ ರೆಡ್ಡಿ (Uttam Kumar Reddy), ತೆಲಂಗಾಣ ಜನರ ಹೃಯದಲ್ಲಿ ಗಾಂಧಿ ಕುಟುಂಬಕ್ಕೆ ವಿಶೇಷ ಸ್ಥಾನವಿದೆ. 2014 ಮತ್ತು 2018ರ ಚುನಾವಣೆಯಲ್ಲಿ ನಾವು ಮಾಡಿದ ತಪ್ಪನ್ನು ಈ ಬಾರಿ ಸರಿಪಡಿಸಿಕೊಂಡಿದ್ದೇವೆ. ಆದ್ದರಿಂದ ಗೆಲುವಿನ ಹಾದಿಯಲ್ಲಿದ್ದೇವೆ. ಮತ್ತೊಂದು ಕಡೆ ಬಿಆರ್‌ಎಸ್ ಸರ್ಕಾರದ ಅಸಮರ್ಥತೆ, ದುರಹಂಕಾರ, ಭ್ರಷ್ಟಾಚಾರ ಅವರ ಸೋಲಿಗೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೈ ಹಿಡಿಯುತ್ತಾ ಗ್ಯಾರಂಟಿ?
12 ಗಂಟೆ ಸಮೀಪಿಸುತ್ತಿದ್ದಂತೆ ತೆಲಂಗಾಣದಲ್ಲಿ ಕಾಂಗ್ರೆಸ್ 64, BRS 42, ಬಿಜೆಪಿ ಹಾಗೂ ಇತರೇ ಪಕ್ಷಗಳು 05 ಸ್ಥಾನಗಳಲ್ಲಿದೆ. ಹಾಗಾಗಿ ಬಹುತೇಕ ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿದೆ. ಇದನ್ನೂ ಓದಿ: 2 ದೊಡ್ಡ ರಾಜ್ಯಗಳಲ್ಲಿ ಗೆಲುವು ಸಿಕ್ಕಿದೆ, ಈ ಫಲಿತಾಂಶ ಮತ್ತೆ ಮೋದಿ ಪ್ರಧಾನಿ ಎಂದು ಹೇಳ್ತಿದೆ: ಮುನಿರತ್ನ
2023ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಕೈ ಹಿಡಿದಿತ್ತು. ಇದೇ ತಂತ್ರವನ್ನು ತೆಲಂಗಾಣ ಚುನಾವಣೆಯಲ್ಲಿ ಅನುಸರಿಸಲಾಗಿತ್ತು. 6 ಪ್ರಮುಖ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಕರ್ನಾಟಕದ ಪ್ರಮುಖ ನಾಯಕರೂ ತೆಲಂಗಾಣದ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ತೆಲಂಗಾಣದಲ್ಲಿ ಕಾಂಗ್ರೆಸ್‍ನಲ್ಲಿ 6 ಗ್ಯಾರಂಟಿ
* ಗ್ಯಾರಂಟಿ 1 – ಪ್ರತಿ ತಿಂಗಳು ಅತ್ತೆಗೆ 4,000 ರೂ. – ಸೊಸೆಗೆ 2,500 ರೂ.
* ಗ್ಯಾರಂಟಿ 2 – ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ)
* ಗ್ಯಾರಂಟಿ 3 – ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ
* ಗ್ಯಾರಂಟಿ 4 – 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
* ಗ್ಯಾರಂಟಿ 5 – ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು
* ಗ್ಯಾರಂಟಿ 6 – ಬಡವರಿಗೆ 200 ಯೂನಿಟ್‍ವರೆಗೂ ಉಚಿತ ವಿದ್ಯುತ್
ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತಿಸ್‌ಗಢ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60. ಇದನ್ನೂ ಓದಿ: ಭೋಪಾಲ್ ಅನಿಲ ದುರಂತಕ್ಕೆ 39 ವರ್ಷ – ಇನ್ನೂ ಮಾಸಿಲ್ಲ 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಕಹಿ ನೆನಪು