DistrictsKarnatakaLatestMain PostUdupi

ಉಡುಪಿಯಲ್ಲಿ ಜಿಟಿಜಿಟಿ ಮಳೆ – ಮತ್ತೆರೆಡು ದಿನ ವರ್ಷಧಾರೆ ಮುನ್ಸೂಚನೆ

ಉಡುಪಿ: ಜಿಲ್ಲೆಯಾದ್ಯಂತ ಜಿಟಿ-ಜಿಟಿ ಮಳೆಯಾಗುತ್ತಿದೆ. ಕಾರ್ಕಳ ಹೆಬ್ರಿ ಭಾಗದಲ್ಲಿ ಭಾರೀ ಮಳೆಯಾಗಿದೆ.

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಬಿಟ್ಟು, ಬಿಟ್ಟು ಮಳೆಯಾಗುತ್ತಿದ್ದು, ಇಂದು ಕೊಂಚ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆ ಎರಡು ದಿನ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಕೊಟ್ಟಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮಹಿಳಾ ಮೀನು ವ್ಯಾಪಾರಿಗಳ ಶೆಡ್ ಧ್ವಂಸ – ಸ್ಥಳೀಯರ ಆಕ್ರೋಶ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದಿರುವ ಕಾರಣ ಕರ್ನಾಟಕದ ಕರಾವಳಿ ತೀರದಲ್ಲೂ ಮಳೆಯಾಗುತ್ತದೆ. ಮಳೆಯ ಜೊತೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಕೂಡ ಬೀಸುತ್ತಿದೆ. ಸಮುದ್ರ ತೀರದ ಜನ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಸಂಜೆ ನಿರ್ಧಾರ: ಸಿಎಂ ಬೊಮ್ಮಾಯಿ

ಕರಾವಳಿಯಲ್ಲಿ ಕಳೆದ 15-20 ದಿನಗಳಿಂದ ಮಳೆಯ ಪ್ರಮಾಣ ಬಹಳ ಕ್ಷೀಣವಾಗಿತ್ತು. ಬೇಸಾಯ ಮತ್ತು ಕೃಷಿ ಚಟುವಟಿಕೆಗಳಿಗೆ ನಿಗದಿತ ಪ್ರಮಾಣದಲ್ಲಿ ಮಳೆ ಅವಶ್ಯಕತೆ ಇದೆ. ಗಣೇಶ ಚತುರ್ಥಿಯವರೆಗೂ ಆಗಾಗ ಮಳೆ ಬೀಳಬಹುದು. ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರು ಎಚ್ಚರಿಕೆಯನ್ನು ವಹಿಸಬೇಕು ಎಂದು ಉಡುಪಿ ಜಿಲ್ಲಾ ಆಡಳಿತ ಸಂದೇಶವನ್ನು ರವಾನೆ ಮಾಡಿದೆ.

ನಗರ ಭಾಗದಲ್ಲಿ ಜಿಟಿ, ಜಿಟಿ ಮಳೆಯಿಂದಾಗಿ ಪಾದಾಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಪರಾದಾಡುವಂತಾಗಿದೆ. ಪ್ರಮುಖ ಜಂಕ್ಷನ್‍ಗಳಲ್ಲಿ ಸ್ಲೋ ಮೂವಿ ಟ್ರಾಫಿಕ್‍ಗೆ ಮಳೆ ಕಾರಣವಾಗಿದೆ. ಮುಂದಿನ ಎರಡು ಮೂರು ದಿವಸಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

Live Tv

Leave a Reply

Your email address will not be published.

Back to top button