ರಾಜ್ಯದಲ್ಲಿ ಬದಲಾವಣೆ ಅವಶ್ಯಕತೆ ಇದೆ: ಮಧು ಬಂಗಾರಪ್ಪ

Public TV
1 Min Read
MADUBANGARAPPA

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಲುವಾಗಿ ಜನರಿಗೆ ಸುಳ್ಳು ಹೇಳಿಕೊಂಡು, ಜನರನ್ನು ನಂಬಿಸಿ ಬಿಜೆಪಿಯವರು ಹಾದಿ ತಪ್ಪಿಸಿದ್ದಾರೆ. ಇದೀಗ ಬದಲಾವಣೆಯ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.

bjp congress 1

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆಯ ಅವಶ್ಯಕತೆ ಕಾಣುತ್ತಿದೆ. ಬದಲಾವಣೆ ಮಾಡಬೇಕು ಎಂಬ ಬಗ್ಗೆ ರಾಜ್ಯದ ಜನರೇ ಬಯಸಿದ್ದಾರೆ. ಜನರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡಬೇಕು ಎಂದರೆ ರಾಜ್ಯಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ. ಹೀಗಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ ಎಂದರು. ಇದನ್ನೂ ಓದಿ: ಪುಟಿನ್ ಭಾರತಕ್ಕೆ ಆಗಮನ – ವಾಯು ರಕ್ಷಣಾ ವ್ಯವಸ್ಥೆಯ ವಿಶೇಷತೆ ಏನು? ಎಷ್ಟು ಶಕ್ತಿಶಾಲಿ?

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಬಡವರಿಗೆ ಒಂದೇ ಒಂದು ಮನೆಯನ್ನು ನೀಡಲು ಸಾಧ್ಯವಾಗಿಲ್ಲ. ಮನೆ ಇಲ್ಲದ ಕಾರಣ ಬಡವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿಯೇ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಮತದಾರರೇ ಕಾಂಗ್ರೆಸ್ ಬೆಂಬಲಿಸಲು ಮನಸ್ಸು ಮಾಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ನಾನು ಇನ್ನು ಮುಂದೆ ಕಣ್ಣೀರು ಹಾಕಲ್ಲ: ಎಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *