ಬಾಗಲಕೋಟೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕೆನ್ನುವವರಲ್ಲಿ ನಾನು ಮೊದಲಿಗ. ಲಿಂಗಾಯತ ಹಾಗೂ ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದ್ದಾರೆ.
ಲಿಂಗಾಯತ ಧರ್ಮವನ್ನ ವಿಶ್ವಗುರು ಬಸವಣ್ಣ ಸ್ಥಾಪನೆ ಮಾಡಿದ್ದಾರೆ. ಆದ್ರೆ ಹಿಂದೂ ಧರ್ಮವನ್ನ ಯಾರು ಸ್ಥಾಪನೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಲಿಂಗಾಯತ ಧರ್ಮದಲ್ಲಿ ಸಮಾನತೆ ಇದೆ. ಜಾತ್ಯಾತೀತ ನಿಲುವಿದೆ. ನಾವು ಸಮಾಜ ಕಟ್ಟುವವರು, ಒಡೆಯುವವರಲ್ಲ. ಒಡೆಯುವವರು ಬೇರೆಯೇ ಇದ್ದಾರೆಂದು ಪರೋಕ್ಷವಾಗಿ ಬಿಜೆಪಿ ನಾಯಕರ ಕಾಲೆಳೆದ್ರು.
Advertisement
Advertisement
ಲಿಂಗಾಯತ ಧರ್ಮಕ್ಕೆ ಪೇಜಾವರ ಶ್ರೀಗಳ ವೀರೋಧಕ್ಕೆ ಪ್ರತಿಕ್ರಿಯಿಸಿ, ಪೇಜಾವರ ಶ್ರೀಗಳು ಇದ್ರಲ್ಲಿ ಮೂಗು ತೂರಿಸೋದು ಬೇಡ. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಎರಡು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಮುಂದುವರೆದಿದ್ರೆ ಈಗಾಗಲೇ ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುತ್ತಿತ್ತು ಅಂದ್ರು.
Advertisement
ಸಿಎಂ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡೋದು ಒಳ್ಳೆಯದು. ಈ ಬಗ್ಗೆ ಪ್ರಕ್ರಿಯೆಗಳು ನಡೆದಿವೆ. ಈ ಹಿಂದೆ ಲಿಂಗಾಯತ ಧರ್ಮ ಪ್ರತ್ಯೇಕಕ್ಕಾಗಿ ಬಿಎಸ್‍ವೈ ಅವ್ರೇ ಸಹಿ ಹಾಕಿದ್ರು. ಸದ್ಯ ವಿರೋಧಿಸೋದು ಬೇಡ ಎಂದು ಸಲಹೆ ನೀಡಿದರು.
Advertisement