ಹುಬ್ಬಳ್ಳಿ: ಮಹತ್ವಾಕಾಂಕ್ಷೆಯ ʻಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ (PM Surya Ghar Muft Bijli Yojan) ಬಗ್ಗೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅಸಮಾಧಾನ ಹೊರಹಾಕಿದರು.
ಜೈಪುರದಲ್ಲಿ ʻಸುಸ್ಥಿರ ಇಂಧನ ಆರ್ಥಿಕತೆಯತ್ತ ಪರಿವರ್ತನೆʼ ಶೃಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ (Congress) ಉಚಿತ ವಿದ್ಯುತ್ ಭರವಸೆ ನೀಡಿದೆ. ಇದರಿಂದ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಎದುರಾಗುತ್ತಿದ್ದು, ಆಗಾಗ್ಗೆ ಕಡಿತಗೊಳಿಸಲಾಗುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ಜನರ ಕಣ್ಣಿಗೆ ಮಣ್ಣೆರೆಚ್ಚುವ ಒಂದು ತಂತ್ರಗಾರಿಕೆ ಅಷ್ಟೇ ಎಂದು ಟೀಕಿಸಿದರು. ಇದನ್ನೂ ಓದಿ: ಇದೇ ಮೊದಲ ಬಾರಿಗೆ ರಾಜ್ಯಸಭೆ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ!
Advertisement
Advertisement
200 ಯೂನಿಟ್ ಉಚಿತ ಎನ್ನುತ್ತಾರೆ. ಆದ್ರೆ, ವಾಸ್ತವದಲ್ಲಿ ಅಷ್ಟು ಕೊಡುವುದೇ ಇಲ್ಲ. ಇದರೊಂದಿಗೆ ಉಳಿದವರಿಗೆ ವಿದ್ಯುತ್ ಶುಲ್ಕ ಏರಿಸಿದ್ದಾರೆ. 10 ರೂ., 11 ರೂ., 12 ರೂ. ಹೀಗೆ ಮನಸೋ ಇಚ್ಛೆ ದರ ಹೆಚ್ಚಳ ಮಾಡಿದ್ದಾರೆ. ಕೈಗಾರಿಕೆ, ವಾಣಿಜ್ಯ ಬಳಕೆದಾರರಿಗೂ ವಿದ್ಯುತ್ ದರ ಏರಿಕೆಯ ಬರೆ ಎಳೆದಿದ್ದಾರೆ. ವಿದ್ಯುತ್ ದರ ಏರಿಕೆ ಮತ್ತು ವಿದ್ಯುತ್ ಕಡಿತದಿಂದ ಬೇಸತ್ತ ಉದ್ಯಮಿಯೊಬ್ಬರು 5,000 ಚದರಡಿಯ ತಮ್ಮ ಮೂರು ಶೆಡ್‌ಗಳಿಗೆ ʻಸೂರ್ಯ ಘರ್ʼ ಅಳವಡಿಸಿಕೊಡುವಂತೆ ತನ್ನನ್ನು ಕೋರಿದರು. ಉಚಿತ ವಿದ್ಯುತ್ ರಾಜ್ಯಗಳಲ್ಲಿ ಅಂತಹ ಪರಿಸ್ಥಿತಿ ತಲೆದೋರಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ
Advertisement
ನಿಜವಾಗಿ ಉಚಿತ ವಿದ್ಯುತ್ ಅಂದ್ರೆ ಸೂರ್ಯ ಘರ್:
ನಿಜವಾಗಿ ಉಚಿತ ವಿದ್ಯುತ್ ಪೂರೈಸುವ ಯೋಜನೆ ಎಂದರೆ ಅದು ʻಸೂರ್ಯ ಘರ್ʼಎಂದು ಪ್ರತಿಪಾದಿಸಿದ ಸಚಿವರು, 3 ಕೆವಿ ವಿದ್ಯುತ್ ಉತ್ಪಾದನೆ ಘಟಕಕ್ಕೆ ಕೇಂದ್ರ ಸರ್ಕಾರ 78,000 ರೂ.ವರೆಗೆ ಸಹಾಯಧನ ನೀಡಲಿದೆ. ಅಲ್ಲದೇ, ಬಳಸಿ ಉಳಿದ ವಿದ್ಯುತ್ ಮಾರಾಟದ ಮೂಲಕ ಆದಾಯಕ್ಕೂ ಅವಕಾಶ ಕಲ್ಪಿಸಿದೆ. ಸೋಲಾರ್ ಪ್ಲ್ಯಾಂಟ್ ಅಳವಡಿಕೆಗೆ ಬ್ಯಾಂಕ್ ಸಾಲ ಸೌಲಭ್ಯಕ್ಕೂ ಅನುವು ಮಾಡಿಕೊಟ್ಟಿದೆ ಎಂದು ಸಚಿವ ಜೋಶಿ ವಿವರಿಸಿದರು. ಇದನ್ನೂ ಓದಿ: Ramanagara | ಹಣದ ಆಸೆಗೆ ಸ್ವಂತ ಮಗುವನ್ನೇ ಮಾರಿದ ತಾಯಿ – ನಾಲ್ವರು ಅರೆಸ್ಟ್
Advertisement
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ ʻಸೂರ್ಯ ಘರ್ ಮುಫ್ತ್ ಬಿಜ್ಲಿʼ ಮಹತ್ವಾಕಾಂಕ್ಷೆಯ ಯೋಜನೆ ಆಗಿದ್ದರೂ ಕಾಂಗ್ರೆಸ್ ಆಡಳಿತದ ರಾಜ್ಯಗಳು ಸರಿಯಾಗಿ ಪ್ರಮೋಟ್ ಮಾಡುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಸಿಎಂ