ಬೀದರ್: ಹಿಂದೂಗಳ ಹತ್ಯೆ (Hindus Murder) ಹಿಂದೆ ಒಂದು ದೊಡ್ಡ ಫಿಲಾಸಫಿ ಇದೆ. ಹಾಗಾಗಿಯೇ ಈ ದೇಶವನ್ನು ಒಡೆಯೋರು ಹಾಗೂ ದೇಶವನ್ನು ಉಳಿಸೋರ ಮಧ್ಯೆ ಕಂದಕ ನಿರ್ಮಾಣವಾಗಿದೆ ಎಂದು ಚಿಂತಕ ಪುಷ್ಪೇಂದ್ರ ಕುಲಶ್ರೇಷ್ಟ (Pushpendra Kulshreshtha) ಹಿಂದೂಗಳ ಹತ್ಯೆಯನ್ನ ತೀವ್ರವಾಗಿ ಖಂಡಿಸಿದರು.
Advertisement
ರಾಷ್ಟ್ರೀಯ ಹಿಂದೂ ಜಾಗರಣ ಸಮಿತಿ (Hindu Jagarana Vedike) ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಜ್ಞಾನವಾಪಿಯಲ್ಲಿ (Gyanvapi Masjid) ಶಿವನ ಮೂರ್ತಿ ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಲಾಗಿತ್ತು. ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಸಿಕ್ಕಿದ್ದು ಜ್ಞಾನವ್ಯಾಪಿಯಲ್ಲಿರುವ ಮಸೀದಿ ಅಸಲಿ ಅಲ್ಲ ಎಂಬುದನ್ನು ತೋರಿಸಿತು. ಏಕೆಂದರೆ ಔರಂಗಜೇಬ್ ಹಾಗೂ ಮುಸ್ಲಿಮರು ಧ್ವಂಸ ಮಾಡಿರುವ ಮೂರ್ತಿಗಳು ಅಲ್ಲಿಯೇ ಇವೆ ಎಂದು ಹೇಳಿದರು. ಇದನ್ನೂ ಓದಿ: ಕೊರೊನಾಗೆ ತತ್ತರಿಸಿದ ಚೀನಾ – ದೈನಂದಿನ ಪ್ರಕರಣಗಳ ಸಂಖ್ಯೆ ಪ್ರಕಟಿಸದಿರಲು ನಿರ್ಧಾರ
Advertisement
Advertisement
ದೆಹಲಿಯಲ್ಲಿ ಶ್ರದ್ಧಾ ವಾಕರ್ (Shraddha Walker) ಹತ್ಯೆ ನಡೆಯಿತು. ಇನ್ನೂ ಅನೇಕ ಹಿಂದೂಗಳ ಹತ್ಯೆ ಈ ದೇಶದಲ್ಲಿ ನಡೆದಿವೆ. ಕೆಲವರು ನಾವು `ವಂದೇ ಮಾತರಂ’ ಹಾಡು ಹಾಡಲ್ಲಾ ನಾವು ಬರೀ ಅಲ್ಲಾಗೆ ವಂದನೆ ಮಾಡುತ್ತೇವೆ. ವಕ್ಫ್ ಬೋರ್ಡ್ ಖಾಸಗಿ ಬೋರ್ಡ್ ಆಗಿದ್ದು ಅಲ್ಲಿ ಕೆಲಸ ಮಾಡುವ ಪದಾಧಿಕಾರಿಗಳು ಸರ್ಕಾರಿ ನೌಕರರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮನೆ ಕೂಡಾ ವಕ್ಫ್ ಬೋರ್ಡ್ ನಿರ್ಮಾಣ ಮಾಡಿದ್ದಾರೆ ಎಂದು ಕುಲಶ್ರೇಷ್ಠ ತಿಳಿಸಿದ್ದಾರೆ. ಇದನ್ನೂ ಓದಿ: ಜಲೀಲ್ ಹತ್ಯೆ ಕೇಸ್ – ಇಬ್ಬರು ಮಹಿಳೆಯರ ವಿಚಾರಣೆ, ಗಾಂಜಾ ಮಾಫಿಯಾದ ವಾಸನೆ