ಕಲಬುರಗಿ: ಸರ್ಕಾರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೆ, ಇಷ್ಟಾದ್ರು ಕಲಬುರಗಿ ಒಂದು ಶಾಲೆಯಲ್ಲಿ ಮಾತ್ರ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುತ್ತಾರೆ.
ಹೌದು, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕಿತ್ತು ಹೋಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಶಿಕ್ಷಕರು ಜೀವ ಕೈಯಲ್ಲಿ ಹಿಡಿದು ಪಾಠ ಮಾಡುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳು ಕೂಡ ಮೇಲ್ಛಾವಣಿ ನೋಡುತ್ತಾ ಪಾಠ ಕೇಳುತ್ತಿದ್ದಾರೆ. ಸದ್ಯ ಈ ಶಾಲೆ ಬಲಿಗಾಗಿ ಕಾದಿದೆ. ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಈ ಶಾಲೆ ಯಾವ ಸಮಯದಲ್ಲಾದ್ರು ಕುಸಿದು ಬೀಳಬಹುದು. ಇದನ್ನೂ ಓದಿ: ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!
Advertisement
ಅಂದಹಾಗೆ ಈ ಶಾಲೆ ನಿರ್ಮಾಣವಾಗಿದ್ದು 1960ರಲ್ಲಿ. 5 ದಶಕಗಳಷ್ಟು ಹಳೆಯದಾದ ಈ ಶಾಲೆ ಇದುವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ಬಂದರೂ ಸಹ, ಶಿಕ್ಷಣ ಇಲಾಖೆ ಮಾತ್ರ ಈ ಶಾಲೆಯತ್ತ ಗಮನ ಹರಿಸದೆ ಇರೋದು ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಕಟ್ಟಡವನ್ನ ದುರಸ್ತಿ ಮಾಡಿಸಿ ಅಂತಾ ಬಿಇಓ, ಡಿಡಿಪಿಐ ಹಾಗೂ ಜಿಲ್ಲಾ ಪಂಚಾಯತ್‍ಗೆ ಸಾಕಷ್ಟು ಬಾರಿ ಮನವಿ ಮಾಡಿದ್ರು, ಕ್ಯಾರೇ ಅಂದಿಲ್ಲ. ಇದನ್ನೂ ಓದಿ: ಬಿಸಿಯೂಟ ತಿಂದು ಕಲುಷಿತ ನೀರಿನಲ್ಲಿ ತಟ್ಟೆ ತೊಳೆಯುತ್ತಿರೋ ಮಕ್ಕಳು- ಇದು ಶಿಕ್ಷಣ ಸಚಿವರ ಜಿಲ್ಲೆಯ ದುಸ್ಥಿತಿ
Advertisement
ಸದ್ಯ ಮಳೆಗಾಲ ಬೇರೆ ಆರಂಭವಾಗಿದೆ. ಶಾಲೆಯ ಎಲ್ಲಾ ಕೋಣೆಗಳು ಸೋರುತ್ತಿವೆ. ಇನ್ನಾದ್ರು ಶಿಕ್ಷಣ ಇಲಾಖೆ ಈ ಶಾಲೆಗೆ ದುರಸ್ತಿ ಭಾಗ್ಯ ಕರುಣಿಸುತ್ತಾ ಕಾದು ನೋಡ್ಬೇಕು.