ನವದೆಹಲಿ: ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಗಂಭೀರ ಆರೋಪ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ (Prajwal Revanna) ಕುರಿತು ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅಮಿತ್ ಶಾ ಹಾಗೂ ಮೋದಿ ನೆರವಿನಿಂದ ವಿದೇಶಕ್ಕೆ ತೆರಳಿದ್ದು, ಅವರ ಕೈ ಹಿಡಿಯುವ ಕೆಲಸ ಬಿಜೆಪಿ (BJP) ಮಾಡಿದೆ. ಅವರು ವಾಪಸ್ ಬರಲು ವಿಳಂಬ ಆಗುತ್ತಿರುವುದಕ್ಕೂ ಕಾರಣ ಬಿಜೆಪಿ. ಇದು ಬಿಜೆಪಿ ರಾಜಕೀಯ ಷಡ್ಯಂತ್ರ. ಮೊದಲು ಪೆನ್‌ಡ್ರೈವ್ ಬಿಜೆಪಿ ನಾಯಕರಿಗೆ ಸಿಕ್ಕಿತ್ತು. ಅದನ್ನು ಲೀಕ್ ಮಾಡಿದ್ದು ಬಿಜೆಪಿ ನಾಯಕರು. ಬಿಜೆಪಿಗೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವುದು ಗುರಿ. ಈಗ ಮೈತ್ರಿ ಮಾಡಿಕೊಂಡು ಜೆಡಿಎಸ್ (JDS) ಮುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಎರಡನೇ ಹಂತದ ಚುನಾವಣೆ – ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ಜೊತೆಗೆ ಬಿಎಂಟಿಸಿ ನಿಯೋಜನೆ
ಪಂಜಾಬ್, ಮಹಾರಾಷ್ಟ್ರ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ್ದಾರೆ. ಈ ವಿಚಾರದಲ್ಲಿ ಮೋದಿ (Narendra Modi) ಅವರ ಮೌನ ಯಾಕೆ? ಇತಿಹಾಸದಲ್ಲಿ ಈ ರೀತಿಯ ಘಟನೆ ನೋಡಿರಲಿಲ್ಲ. ಆದರೆ ಮೋದಿ ಅವರು ವೇದಿಕೆಗೆ ಬಂದು ಪ್ರಜ್ವಲ್‌ಗೆ ಮತ ನೀಡಿದರೆ ನನ್ನನ್ನು ಬಲಪಡಿಸಿದಂತೆ ಎಂದು ಹೇಳುತ್ತಾರೆ. ದಾವಣಗೆರೆಯಲ್ಲಿ ಮೋದಿ ಮಾತನಾಡಬಹುದು ಎಂದು ಎಲ್ಲರು ಅಂದುಕೊಂಡಿದ್ದರು, ಆದರೆ ಮಾತನಾಡಲಿಲ್ಲ. ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ತೆರಳಿದ್ದ ಅಮಿತ್ ಶಾ (Amit Shah) ಪ್ರಜ್ವಲ್ ಸಂತ್ರಸ್ತರ ಮನೆಗೆ ಯಾಕೆ ಹೋಗಿಲ್ಲ? ಅರವಿಂದ್ ಲಿಂಬಾವಳಿ ಅವರು ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಹೇಳಿದ್ದಾರೆ. ಆದರೆ ವಿಜಯೇಂದ್ರ, ಅಶೋಕ್ ನಿಲುವು ಏನು? ಬಿಜೆಪಿ ನಾಯಕರೇ ಪ್ರಜ್ವಲ್‌ನನ್ನು ರಾಜ್ಯಕ್ಕೆ ಕರೆತರುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?
ಮೋದಿ ಅಮಿತ್ ಶಾಗೆ ಮನವಿ ಮಾಡುತ್ತಿದ್ದೇನೆ. ರಾಜ್ಯದ ಮಾನ ಮರ್ಯಾದೆ ಪೆನ್‌ಡ್ರೈವ್ ಮೂಲಕ ಹಂಚಿದ್ದಾರೆ. ಮೈತ್ರಿ ರದ್ದು ಮಾಡುವ ಮಾತುಗಳು ಕೇಳಿ ಬರುತ್ತಿದೆ. ಈವರೆಗೂ ಅಧಿಕೃತ ಹೇಳಿಕೆ ಬಂದಿಲ್ಲ. ಜೆಡಿಎಸ್ ಮುಗಿಸುವ ಕನಸು ನನಸಾಗುತ್ತಿದೆ. ಮೈತ್ರಿ ಮುರಿಯದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ ವಾಷಿಂಗ್ ಮಿಷನ್‌ನಲ್ಲಿ ಕ್ಲೀನ್ ಮಾಡಲಾಗುತ್ತದೆ. ಜೆಡಿಎಸ್ ಅನ್ನು ಬಿಜೆಪಿ ಜೊತೆಗೆ ವಿಲೀನ ಮಾಡಬಹುದು. ಬ್ರಿಜ್‌ಭೂಷಣ್ ವಿರುದ್ಧವೂ ಕ್ರಮ ತೆಗೆದುಕೊಳ್ಳಲಿಲ್ಲ. ಮಂಗಳವಾರ ಮತದಾನ ಇದೆ. ಜನರು ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಂಟ್ವಾಳದಲ್ಲಿ ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು