ಅಹಮದಾಬಾದ್: ಗುಜರಾತ್ ಕಾಂಗ್ರೆಸ್‌ನಲ್ಲಿ (Gujarat Congress) ಎರಡು ಬಣಗಳಿವೆ. ಒಂದು ಸಾರ್ವಜನಿಕರೊಂದಿಗೆ ಇದ್ದರೆ, ಇನ್ನೊಂದು ಸಾರ್ವಜನಿಕರಿಂದ ದೂರವಿರುತ್ತದೆ. ಕಾಂಗ್ರೆಸ್ ಪಕ್ಷವು 20-30 ಜನರನ್ನು ಹೊರಹಾಕಬೇಕಾಗಿದ್ದರೂ ಸಹ ಹಾಗೆ ಮಾಡಲು ಯಾವುದೇ ಹಿಂಜರಿಕೆ ಇರಬಾರದು. ಪಕ್ಷದಲ್ಲಿ ಹಲವು ಸಿಂಹಗಳಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಲಾಂಗ್ ಹಿಡಿದು ಬೈಕ್ ರೈಡ್ – ರೌಡಿಶೀಟರ್ ಸಿದ್ದಿಕಿ ಬಂಧನ
ಗುಜರಾತ್ ಪ್ರದೇಶ ಕಾಂಗ್ರೆಸ್ ನಾಯಕರು ನಿರ್ದೇಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದರಲ್ಲಿ ತಮಗೆ ಯಾವುದೇ ಸಮಸ್ಯೆ ಇಲ್ಲ. ಸ್ಥಳೀಯ ನಾಯಕರ ಹೃದಯದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ನನ್ನ ಗುರಿಯಾಗಿತ್ತು. ಈ ಸಂಭಾಷಣೆಯಲ್ಲಿ, ಸಂಘಟನೆ, ಗುಜರಾತ್ ರಾಜಕೀಯ ಮತ್ತು ಇಲ್ಲಿನ ಸರ್ಕಾರದ ಕಾರ್ಯವೈಖರಿಗೆ ಸಂಬಂಧಿಸಿದ ಹಲವು ವಿಷಯಗಳು ಬೆಳಕಿಗೆ ಬಂದವು ಎಂದರು. ಇದನ್ನೂ ಓದಿ: ಮೇಕೆದಾಟು ವರ ಅಂತ ತ.ನಾಡು ಶಾಸಕರೇ ಹೇಳಿದ್ದಾರೆ, ರಾಜಕೀಯಕ್ಕಾಗಿ ವಿರೋಧ: ನಂಜಾವಧೂತ ಶ್ರೀ
ಗುಜರಾತ್‌ನ ಕಾಂಗ್ರೆಸ್ ಸಂಘಟನೆಗಳಲ್ಲಿ ಹಲವು ವಿಭಜನೆಗಳಿವೆ. ಒಬ್ಬರು ಸಾರ್ವಜನಿಕರನ್ನು ಗೌರವಿಸುತ್ತಾರೆ, ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿ ಎತ್ತುತ್ತಾರೆ ಮತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಇನ್ನೊಂದು ಗುಂಪು ಸಾರ್ವಜನಿಕರನ್ನು ಗೌರವಿಸುವುದಿಲ್ಲ. ಈ ಎರಡು ರೀತಿಯ ಪಕ್ಷದ ನಾಯಕರನ್ನು ಬೇರ್ಪಡಿಸದ ಹೊರತು, ಇಲ್ಲಿಯ ಜನರು ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ `ವಿದಿಶಾ ಪ್ರಹಸನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ