– 5 ಗ್ಯಾರಂಟಿ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ
– ಮೋದಿ ಪ್ರಧಾನಮಂತ್ರಿಯಾಗಿ ಸುಳ್ಳಿನ ಮಾರುಕಟ್ಟೆ ಮಾಡುತ್ತಿದ್ದಾರೆ
ಕಲಬುರಗಿ: ಶುಕ್ರವಾರ ಮೊದಲನೇ ಹಂತದ ಚುನಾವಣೆ (Lok Sabha Election) ಮುಗಿದಿದೆ. ಅದರಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವರದಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದರು.
Advertisement
ಈ ಕುರಿತು ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, ಎಲ್ಲಾ ಅಭ್ಯರ್ಥಿ ಮತ್ತು ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಮ್ಮ 5 ಗ್ಯಾರಂಟಿ (Guarantee Scheme) ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆ ಪ್ರಸ್ತಾಪ ಮಾಡಿದ್ದೇವೆ. ನರೇಂದ್ರ ಮೋದಿ (Narendra Modi) ಈ ದೇಶದ ಪ್ರಧಾನಮಂತ್ರಿಯಾಗಿ ಸುಳ್ಳಿನ ಮಾರುಕಟ್ಟೆ ಮಾಡುತ್ತಿದ್ದಾರೆ. ಹಿಂದುಳಿದವರ ಮೀಸಲಾತಿ ಆರ್ಟಿಕಲ್ 15 ಮತ್ತು 16ರ ಪ್ರಕಾರ ಈ ಸಮಾಜದಲ್ಲಿ ಅವರಿಗೆ ಮೀಸಲಾತಿ ಕೊಡಬೇಕಾಗಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿನಾಯಕಿಯಿಂದ್ಲೇ ಏನೂ ಮಾಡೋಕೆ ಆಗಲಿಲ್ಲ- ತಂಗಡಗಿಗೆ ರೆಡ್ಡಿ ಟಾಂಗ್
Advertisement
Advertisement
ರಾಜೀವ್ ಗಾಂಧಿ ಪ್ರಧಾನ ಮಂತ್ರಿ ಆದಾಗ ಆರ್ಟಿಕಲ್ 73&74 ಕಾನೂನು ಜಾರಿಗೆ ತಂದು ಮಹಿಳೆಯರಿಗೆ ಮೀಸಲಾತಿ ತಂದರು. ಆದರೆ ಅದು ಅವರ ಕಾಲದಲ್ಲಿ ಜಾರಿ ಆಗಲಿಲ್ಲ, ನರಸಿಂಗ್ ರಾವ್ ಕಾಲದಲ್ಲಿ ಜಾರಿ ಆಯಿತು. ಕರ್ನಾಟಕದಲ್ಲಿ ಬಿಸಿಎಂ ಎ ಮತ್ತು ಬಿ ಅಂತ ರಿಸರ್ವೇಶನ್ ಮಾಡಿದ್ದೇವೆ. ಈ ಮೂಲಕ ಮಹಿಳೆಯರಿಗೆ 33% ಮೀಸಲಾತಿ ಮಾಡಿದೆವು. ಹಿಂದುಳಿದವರಿಗೆ 33% ಮೀಸಲಾತಿ ಮಾಡಿದ್ದು, 6.6% ಬಿಸಿಎಂ ಬಿಯವರಿಗೆ ಮೀಸಲಾತಿ ಕೊಡಲಾಯಿತು. ಇದೆಲ್ಲ 1994-95ರಲ್ಲಿ ನಾನು ಹಣಕಾಸು ಮಂತ್ರಿ ಇದ್ದಾಗ ಮಾಡಿದ್ದೆವು. ಹಿಂದುಳಿದವರ ಮೀಸಲಾತಿಯಲ್ಲಿ ಮುಸ್ಲಿಮರನ್ನು ಸೇರಿಸಲಾಗಿದೆ. ಆದರೆ ಬಿಜೆಪಿ ರಾಮಾಜೋಯಿಸ್ ಈ ಮೀಸಲಾತಿ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದರು. ಖುದ್ದು ಅವರೇ ವಾದ ಮಂಡಿಸಿದ್ದರು. ಆದರೆ ಸುಪ್ರೀಂಕೋರ್ಟ್ ಮೀಸಲಾತಿ ಎತ್ತಿ ಹಿಡಿಯಿತು. ಶಿಕ್ಷಣದಲ್ಲಿ ಹಾಗು ಉದ್ಯೋಗದಲ್ಲಿ ಚಿನ್ನಪ್ಪ ರೆಡ್ಡಿ ಅವರ ಮೀಸಲಾತಿ ಶಿಫಾರಸು ಮಾಡಿದರು. ಅದನ್ನು ವೀರಪ್ಪ ಮೋಯ್ಲಿ ಕಾಲದಲ್ಲಿ ಶಿಫಾರಸು ಮಾಡಿದ್ರೆ ದೇವೇಗೌಡರ ಕಾಲದಲ್ಲಿ ಜಾರಿ ಆಯಿತು ಎಂದು ಹೇಳಿದರು. ಇದನ್ನೂ ಓದಿ: ಬರ ಪರಿಹಾರ; ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ: ಕೃಷ್ಣ ಬೈರೇಗೌಡ
Advertisement
ಕೇಂದ್ರ ಸರ್ಕಾರದಿಂದ 3,400 ಕೋಟಿ ರೂ. ಬರ ಪರಿಹಾರ (Drought Relief) ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಕೇಳಿದ್ದು 18,172 ಕೋಟಿ ರೂ. ಒಟ್ಟು 35 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. 48 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಎನ್‌ಡಿಆರ್‌ಎಫ್ (NDRF) ನಿಯಮದ ಪ್ರಕಾರ 18 ಸಾವಿರ ಕೋಟಿ ರೂ. ಕೇಳಿದ್ದೆವು. ಆಗ ನಿರ್ಮಲಾ ಸಿತಾರಾಮನ್, ಅಮಿತ್ ಶಾ ಸುಳ್ಳು ಹೇಳಿದರು. ಕೋಡ್ ಆಫ್ ಕಂಡಕ್ಟ್ ಬಂದಿದೆ ಅಂತ ಅಮಿತ್ ಶಾ ಹೇಳಿದ್ರೆ ನಿರ್ಮಲಾ ಸಿತಾರಾಮನ್ ಬರಗಾಲಕ್ಕೆ ಮನವಿ ಕೊಟ್ಟಿಲ್ಲ, ಗ್ಯಾರಂಟಿಗಳಿಗೆ ದುಡ್ಡು ಕೇಳಿದ್ದಾರೆ ಎಂದರು. ನಾವು ಗ್ಯಾರಂಟಿಗಳಿಗೆ ನಯಾಪೈಸೆ ದುಡ್ಡು ಕೇಳಿಲ್ಲ, ಕೇಳೋದು ಇಲ್ಲ. ಈಗ ಕೇಂದ್ರ ಸರ್ಕಾರ ಬಹಳ ಕಡಿಮೆ ಹಣ ಕೊಟ್ಟಿದ್ದಾರೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದ ಕೇಂದ್ರ
ಕಲಬುರಗಿಯಲ್ಲಿ ನಡೆದ ಘಟನೆ ಮೋದಿ ಬೇರೆ ರಾಜ್ಯದಲ್ಲಿ ಪ್ರಸ್ತಾಪದ ಕುರಿತು ಮಾತನಾಡಿದ ಅವರು, ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅದನ್ನು ಬಿಟ್ಟು ಏನು ಮಾಡಿದ್ದಾರೆ? ಜನರ ಭಾವನೆಗಳ ಜೊತೆ ಸರಿ ಇಲ್ಲ. ಪ್ರಧಾನಿ ಆಗಿ ಇಂತಹ ಹೇಳಿಕೆ ಪ್ರಧಾನಿ ಸ್ಥಾನಕ್ಕೆ ಗೌರವ ತರಲ್ಲ. ಇದರಿಂದ ನಮಗೆ ಏನು ಧಕ್ಕೆ ಆಗಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಅವರು ಕ್ರಮ ಜರುಗಿಸಿಲ್ಲ, ಕ್ರಮ ಆಗಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ. ನಾವು ಏನು ಮಾಡಿದ್ದೇವೆ, ಕೇಂದ್ರ ಏನು ಮಾಡಿದೆ ಅದರ ಬಗ್ಗೆ ಜನರ ತೀರ್ಪು ಅಂತಿಮ. ಜನ ನಮ್ಮ 5 ಗ್ಯಾರಂಟಿ ಇಂಪ್ಯಾಕ್ಟ್ ಆಗಿ ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದರು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಚಾಲನೆ
ಕಲಬುರಗಿಯಲ್ಲಿ ಕೈ ನಾಯಕನ ವಾಹನದಲ್ಲಿ 2 ಕೋಟಿ ಹಣ ಸೀಜ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ. ಅದರ ಬಗ್ಗೆ ಆಯೋಗ ಕ್ರಮ ತೆಗೆದುಕೊಳ್ಳಲಿ. ಬಿಜೆಪಿ ಅಭ್ಯರ್ಥಿ ಸುಧಾಕರ್ ಬಳಿ 4.80 ಕೋಟಿ ಹಣ ಸಿಕ್ಕಿದೆ. ಯಾರೇ ಇದ್ದರು ಸಹ ಅವರ ಮೇಲೆ ಕ್ರಮ ಜರುಗಿಸಲಿ ಎಂದರು. ಇನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ಶೀತಲ ಸಮರ ವಿಚಾರವಾಗಿ ಮಾತನಾಡಿ, ನನ್ನ ಹಾಗೂ ಡಿಕೆಶಿ ನಡುವೆ ಶೀತಲ ಸಮರ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಇವಿಎಂ ಮೆಷಿನ್ ಸಾಗಿಸುತ್ತಿದ್ದ ವಾಹನದ ಟೈರ್ ಬ್ಲಾಸ್ಟ್