ಬೆಂಗಳೂರು: ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಕಳೆಗಟ್ಟಿತ್ತು. ಆದರೆ ಈ ಬಾರಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಅನೇಕರು ನಿರ್ಧರಿಸಿದ್ದಾರೆ. ಆದರೆ ಗಣೇಶನನ್ನು ಕೂರಿಸಲು ಪೊಲೀಸ್ ಇಲಾಖೆಯಿಂದ ಹತ್ತಾರು ನಿಬಂಧನೆಗಳು ಸಿದ್ಧವಾಗಿದ್ದು, ಆಯೋಜಕರು ಕಟ್ಟುನಿಟ್ಟಿನ ನಿಬಂಧನೆಗಳನ್ನ ಫಾಲೋ ಮಾಡಬೇಕು. ಗಣೇಶನನ್ನು ಕೂರಿಸಲು ಇರುವ ನಿಬಂಧನೆಗಳು ಈ ರೀತಿಯಾಗಿವೆ.
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಬಿಎಂಪಿಯ ಏಕಗವಾಕ್ಷಿಯಲ್ಲಿ ಅನುಮತಿ ಪಡೆಯಬೇಕು. ಸದೃಢವಾಗಿ ಶಾಮಿಯಾನ ನಿರ್ಮಿಸಬೇಕು. ಶಾಮಿಯಾನಗೆ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಬಹುದು. ಆದರೆ ಶಾಮಿಯಾನ ಹೊರತುಪಡಿಸಿ ಬೇರೆಡೆ ಫ್ಲೇಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಂತಿಲ್ಲ. ಹಾಗೂ ಸ್ಥಳ ಮಾಲೀಕರು ಮತ್ತು ಬಿಬಿಎಂಪಿ ಏಕಗವಾಕ್ಷಿ ಅನುಮತಿ ಪಡೆಯಬೇಕು.
Advertisement
Advertisement
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 24 ಗಂಟೆ ಆಯೋಜಕ ಕಾರ್ಯಕರ್ತರು ಇರಬೇಕು. ಅವರ ವಿವರಗಳನ್ನು ಪೊಲೀಸರಿಗೆ ಕೊಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಪೊಲೀಸ್ ಹಾಗೂ ಬಿಬಿಎಂಪಿ ನಿಯಮದಂತೆ ಸಿಸಿಟಿವಿಗಳ ಅಳವಡಿಕೆ ಮಾಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಂಕಿ ನಂದಿಸುವ ಉಪಕರಣಗಳು ಇರಬೇಕು. ಮರಳು ತುಂಬಿದ ಬಕೆಟ್, ನೀರಿನ ವ್ಯವಸ್ಥೆ ಇರಬೇಕು.
Advertisement
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡಬಾರದು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಷಿನ್ ಇರಬೇಕು, ಸಮರ್ಪಕ ಬೆಳಕು, ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾರ್ಟ್ ಸರ್ಕ್ಯೂಟ್, ಇತರ ಅವಘಡ ತಡೆಯಲು ಸನ್ನದ್ಧರಾಗಿರಬೇಕು. ಸಾರ್ವಜನಿಕರು ಬರಲು ಹೋಗಲು ಸಮರ್ಪಕ ಆಗಮನ ನಿರ್ಗಮನ ವ್ಯವಸ್ಥೆ ಇರಬೇಕು. ಬ್ಯಾರಿಕೇಡ್ ನಿರ್ಮಿಸಿ, ಸ್ವಯಂ ಸೇವಕರು ಇರಬೇಕು. ಜನ ಹೆಚ್ಚಾದರೆ ಖಾಸಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು.
Advertisement
ಗಣೇಶ ವಿಸರ್ಜನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಆಯೋಜಕರು ಕ್ರಮ ವಹಿಸುವುದು. ಮನರಂಜನಾ ಕಾರ್ಯಕ್ರಮ, ಮೆರವಣಿಗೆ, ವಿಸರ್ಜನೆ ವೇಳೆ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಕೀಟಲೆ ಮಾಡಿದಾಗ ಕೂಡಲೇ ಪೊಲೀಸರ ಸಂಪರ್ಕಿಸುವುದು. ಸರ್ಕಾರ ಮತ್ತು ಹೈಕೋರ್ಟ್ ಆದೇಶದಂತೆ ಹಿರಿಯ ನಾಗರಿಕರು, ರೋಗಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಯಮಿತವಾಗಿ ಬಳಸುವುದು. ಇದನ್ನೂ ಓದಿ: ರಾಷ್ಟ್ರೀಯ ಭದ್ರತಾ ಸಮೂಹಕ್ಕೆ `ಡ್ರೋನ್ ಸಮೂಹ’ ಸೇರ್ಪಡೆ – ಏನಿದರ ವಿಶೇಷತೆ?
ಗಣೇಶ ಪ್ರತಿಷ್ಠಾಪನೆ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ತಮ್ಮ ವಿಳಾಸ ಮತ್ತು ಫೋನ್ ನಂಬರ್ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ನೀಡುವುದು ಹಾಗೂ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು. ಯಾವುದೇ ರೀತಿಯ ಲೇಸರ್ ಪ್ರೊಜೆಕ್ಷನ್ ಮಾಡಬಾರದು. ಮೆರವಣಿಗೆ ಸೂಕ್ಷ್ಮ ಸ್ಥಳ, ಅತಿ ಸೂಕ್ಷ್ಮ ಸ್ಥಳದಲ್ಲಿ ಸಾಗುವಾಗ ಸಿಡಿಮದ್ದು ಪಟಾಕಿ ಸಿಡಿಸದಂತೆ ನೋಡಿಕೊಳ್ಳಬೇಕು.
ಗಣೇಶ ಪ್ರತಿಷ್ಠಾಪನೆ ಮತ್ತು ಕಾರ್ಯಕ್ರಮಕ್ಕೆ ಬಲವಂತವಾಗಿ ವಂತಿಗೆ ವಸೂಲಿ ಮಾಡಿದರೆ ಕಠಿಣ ಕ್ರಮ. ಆಯೋಜಕರು ಸ್ವಯಂ ಸೇವಕರಿಗೆ ಟೀ ಶರ್ಟ್ ಮತ್ತು ಗುರುತಿನ ಚೀಟಿ, ಕ್ಯಾಪ್ ಕೊಟ್ಟು ಅವರನ್ನ ಗುರುತಿಸಲು ಸಾಧ್ಯವಾಗಬೇಕು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ನಿಧನ