ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಅಖಾಡಕ್ಕೆ ಅಂತಿಮವಾಗಿದೆ. ಚುನಾವಣಾ ಕಣದಲ್ಲಿ ಒಟ್ಟು 2,655 ಅಭ್ಯರ್ಥಿಗಳಿದ್ದು, ವಿಧಾನಸಭಾ ಚುನಾವಣೆಗಾಗಿ 224 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 3,509 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಈ ಪೈಕಿ 271 ಮಂದಿ ನಾಮಪತ್ರ ತಿರಸ್ಕೃತಗೊಂಡ ಬಳಿಕ ಇದ್ದ ಒಟ್ಟು 3,238 ಮಂದಿ ಅಭ್ಯರ್ಥಿಗಳ ಪೈಕಿ 583 ಮಂದಿ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಒಟ್ಟು 2,655 ಮಂದಿ ಚುನಾವಣಾ ಕಣದಲ್ಲಿದ್ದಾರೆ.
Advertisement
Advertisement
ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ 222 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್ (201) ಮತ್ತು ಬಿಎಸ್ಪಿ (18) ಸೇರಿ 219 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
Advertisement
ಮುಳಬಾಗಿಲಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡ್ರೆ, ಮೇಲುಕೋಟೆಯಲ್ಲಿ ಕೆ ಎಸ್ ಪುಟ್ಟಣಯ್ಯ ಪುತ್ರ ದರ್ಶನ್‍ರನ್ನು ಕೈ ಬೆಂಬಲಿಸಿದೆ. 1,155 ಪಕ್ಷೇತರು, 800 ಮಂದಿ ಇತರೆ ಪಕ್ಷಗಳಿಂದ ಸ್ಪರ್ಧಿಸ್ತಿದ್ದಾರೆ. 2,436 ಮಂದಿ ಪುರುಷ ಮತ್ತು 219 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.