ಬಿಗ್ ಬಾಸ್ ಮಾಜಿ ಸ್ಪರ್ಧಿ, ಸ್ಟಾರ್ ಕಪಲ್ ಎಂದೇ ಖ್ಯಾತರಾಗಿರುವ ಅಂಕಿತಾ ಲೋಖಂಡೆ (Ankita Lokhande) ಮತ್ತು ಪತಿ ವಿಕ್ಕಿ ಜೈನ್ (Vicky Jain) ಆಸ್ಪತ್ರೆಯ (Hospital) ಬೆಡ್ (Bed) ಮೇಲೆ ಮಲಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಂಕಿತಾ ಕೈಗೆ ಏಟಾಗಿದ್ದು, ಅದಕ್ಕೆ ಅವರು ಚಿಕಿತ್ಸೆ ಪಡೆದಿದ್ದಾರೆ. ಆದರೆ, ವಿಕ್ಕಿ ಅವರನ್ನು ಯಾಕೆ ಬೆಡ್ ಮೇಲೆ ಕರೆಯಿಸಿಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ಪ್ರಶ್ನೆ ಕೇಳಿದ್ಧಾರೆ.
ಈ ಹಿಂದೆ ಇದೇ ಜೋಡಿ ತಮ್ಮ ಅಭಿಮಾನಿಗಳಿಗಾಗಿ ಬೆಡ್ ರೂಮ್ ಫೋಟೋ ಶೇರ್ ಮಾಡಿಕೊಂಡಿದ್ದರು. ಮದುವೆಯಾಗಿ 6 ವರ್ಷ ಪೂರೈಸಿದ ಖುಷಿಯಲ್ಲಿಅಂಕಿತಾ ದಂಪತಿ ಬೆಡ್‌ರೂಮ್ ನಲ್ಲಿ ಇರುವ ಫೋಟೋ ವೊಂದನ್ನು ಹಂಚಿಕೊಂಡಿದ್ದರು.
ಆಗ ಅಂಕಿತಾ ಮತ್ತು ವಿಕ್ಕಿ ಜೈನ್ (Vicky Jain) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟು 6 ವರ್ಷ ಪೂರೈಸಿತ್ತು. ತಮ್ಮ ಮದುವೆಯ ದಿನವನ್ನು ಕೇಕ್ ಕತ್ತರಿಸಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದರು. ಇಬ್ಬರೂ ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದರು. ಮೊದಲ ರಾತ್ರಿಗೆ ಬೆಡ್ ಸಿಂಗಾರ ಮಾಡುವ ಹಾಗೆಯೇ ಆಗಲೂ ಮಾಡಿದ್ದರು. ಇಬ್ಬರೂ ಖುಷಿಯಿಂದ ಕುಳಿರುವ ಫೋಟೋವನ್ನು ಹಂಚಿಕೊಂಡಿದ್ದರು.
ಆಗ ಫೋಟೋ ನೋಡ್ತಿದ್ದಂತೆ, ಇದು ಫಸ್ಟ್ ನೈಟ್ ಫೋಟೋನಾ ಎಂದು ಹಲವರು ಕಾಮೆಂಟ್ ಮಾಡಿದ್ದರು. ಇನ್ನೂ ಕೆಲವರು, ನನಗೆ ಕನ್ಫೂಸ್ ಆಗುತ್ತಿದೆ. ನೀವು ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಡುತ್ತಿದ್ದೀರಿ. ಈಗ ಹೇಗೆ ಖುಷಿಯಾಗಿದ್ದೀರಾ ಎಂದು ಕಾಲೆಳೆದಿದ್ದರು.
ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಮೇಲೆ ಅಂಕಿತಾ ಬಾಲಿವುಡ್ ಸಿನಿಮಾಗಳಿಗೆ ಭಾರೀ ಆರ‍್ಸ್ ಸಿಗುತ್ತಿದೆ. ವಿಕ್ಕಿ ಜೈನ್‌ಗೆ ರಿಯಾಲಿಟಿ ಶೋಗಳಿಂದ ಅವಕಾಶ ಅರಸಿ ಬರುತ್ತಿದೆ.