Connect with us

Districts

ಪಂಪ್‍ಸೆಟ್ ಮೋಟರ್ ಕಳ್ಳತನ ಮಾಡಿದ್ದ ಇಬ್ಬರ ಖದೀಮರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

Published

on

ಗದಗ: ರಾತ್ರಿ ವೇಳೆ ಪಂಪ್ ಸೆಟ್ ಮೋಟರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನ ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯರಾದ ಗಿರೀಶ್ ಹಾಗೂ ಕೊಟುಮಚಗಿ ಗ್ರಾಮದ ಉದಯ್ ಇಬ್ಬರು ರಾತ್ರಿ ವೇಳೆ ರೈತರ ಜಮೀನಿನಲ್ಲಿರೋ ಮೋಟರ್ ಕಳ್ಳತನಕ್ಕೆ ಹೋದ ವೇಳೆ ಸಿಕ್ಕಿಬಿದ್ದಿದ್ದಾರೆ. ರೊಚ್ಚಿಗೆದ್ದ ಗ್ರಾಮಸ್ಥರು ಶ್ಯಾಗೋಟಿ ಬಸ್ ನಿಲ್ದಾಣದ ಬಳಿ ಕಳ್ಳರಿಬ್ಬರಿಗೂ ಧರ್ಮದೇಟು ನೀಡಿದ್ದಾರೆ.

ಬರಗಾಲದಲ್ಲಿ ಕಂಗೆಟ್ಟ ರೈತರಿಗೆ ಈ ಕಳ್ಳರಿಬ್ಬರು ಪಂಪ್‍ಸೆಟ್ ಕಳ್ಳತನ ಮಾಡುವ ಮೂಲಕ ಪಂಪ್ ಸೆಟ್ ಮಾಲೀಕರ ನಿದ್ದೆ ಕಡೆಸಿದ್ದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Click to comment

Leave a Reply

Your email address will not be published. Required fields are marked *

www.publictv.in