ಬೆಂಗಳೂರು: ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ರೆ ಜೋಪಾನವಾಗಿರಿ. ಯಾಕಂದರೆ ಓಲ್ಡ್ ಏಜ್ ಪೆನ್ಷನ್ ನೆಪದಲ್ಲಿ ಲೂಟಿಕೋರನೊಬ್ಬ ಬಂದಿದ್ದಾನೆ.
ಈ ಲೂಟಿಕೋರ ಮಂಜೇಶ್ ವೃದ್ಧಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ಚಿನ್ನಾಭರಣ ದೋಚುತ್ತಿದ್ದಾನೆ. ಸುಮಾರು ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೂ ಈತ ಚಿರಪರಿಚಿತನಾಗಿದ್ದು, ಸೈಲೆಂಟಾಗಿ ಬಂದು ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದಾನೆ.
Advertisement
Advertisement
ಆಸ್ಪತ್ರೆ, ಮಂದಿರ-ಮಸೀದಿಗಳೇ ಈತನ ಹಾಟ್ ಫೇವರೇಟ್ ಸ್ಪಾಟ್ ಆಗಿದೆ. ವೃದ್ಧಾಪ್ಯ ವೇತನ ಕೊಡಿಸೋದಾಗಿ ಮೊದಲಿಗೆ ನಂಬಿಸುತ್ತಾನೆ. ಅದಕ್ಕಾಗಿ ನಿಮ್ಮದೊಂದು ಫೋಟೋ ಬೇಕೆಂದು ಸ್ಟುಡಿಯೋಗೆ ಕರೆದುಕೊಂಡು ಹೋಗುತ್ತಾನೆ. ಈ ವೇಳೆ ಹೀಗೆಲ್ಲ ಒಡವೆ ಹಾಕಿಕೊಂಡರೆ ಓಲ್ಡ್ ಪೆನ್ಷನ್ ಕೊಡಲ್ಲ. ನಿಮ್ಮನ್ನು ಶ್ರೀಮಂತರು ಅಂದುಕೊಂಡು ಬಿಡುತ್ತಾರೆ. ಹೀಗಾಗಿ ಎಲ್ಲಾ ಬಿಚ್ಚಿಡಿ ಎಂದು ಹೇಳುತ್ತಾನೆ. ಹೀಗೆ ಗಿಮಿಕ್ ಮಾಡಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಾನೆ.
Advertisement
Advertisement
ಭಾನುವಾರವೂ ವೃದ್ಧರೊಬ್ಬರನ್ನ ನಂಬಿಸಿ ಮಂಜೇಶ್ ಚಿನ್ನಾಭರಣ ದೋಚಿದ್ದಾನೆ. ಬೆಂಗಳೂರಿನ ಬಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮಂಜೇಶ್ ತನ್ನ ಕೈ ಚಳಕ ತೋರಿದ್ದಾನೆ. ಆರೋಪಿ ವಂಚನೆಗೊಳಗಾದವರನ್ನ ತನ್ನ ಬೈಕ್ ನಲ್ಲಿ ಕರೆದೊಯ್ತಿರೋ ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದೆ.
ಬಗಲುಗುಂಟೆ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.