ರಾಯಚೂರು: ಜಿಲ್ಲೆಯಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಪ್ರತ್ಯೇಕ ಕಳ್ಳರ ಗುಂಪುಗಳು ಜಿಲ್ಲೆಯ ಹಲವೆಡೆ ನಗ, ನಗದು ದೋಚಿ ಪರಾರಿಯಾಗಿದ್ದಾರೆ.
ಮಾನ್ವಿ ತಾಲೂಕಿನ ಭೋಗಾವತಿ ಗ್ರಾಮದ ಅಮರಪ್ಪ ಗೌಡ ಎಂಬವರ ಮನೆಯಲ್ಲಿ 14.3 ಗ್ರಾಂ ಬಂಗಾರ ಮತ್ತು 15 ಸಾವಿರ ರೂಪಾಯಿ ನಗದು ಕಳ್ಳತನವಾಗಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಮನಪ್ಪ ಗುಡದನಾಳ ಎಂಬುವವರ ಕೆಎ 35 ಬಿ 8211 ಸಂಖ್ಯೆಯ ಜೆಸಿಬಿ ಕಳ್ಳತನವಾಗಿದೆ. ಅಂಕುಶದೊಡ್ಡಿ ಗ್ರಾಮದ ಹೊರವಲಯದಲ್ಲಿ ರಸ್ತೆ ಕಾಮಗಾರಿಗಾಗಿ ನಿಲ್ಲಿಸಿದಾಗ ಕಳ್ಳತನವಾಗಿದೆ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುದಗಲ್ ಗ್ರಾಮದ ಶಂಕರ್ ಸಿಂಗ್ ಎಂಬವರ ಮನೆಯಲ್ಲಿ 1 ಲಕ್ಷ 50 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ ಕಳ್ಳತನವಾಗಿದೆ. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂರು ಪ್ರಕರಣಗಳು ಎರಡು ದಿನಗಳ ಅಂತರದಲ್ಲಿ ನಡೆದಿದ್ದು ದಿನದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸಿ ಬೆಲೆಬಾಳುವ ಬಂಗಾರ, ನಗದನ್ನು ತಮ್ಮ ಲಾಕರ್ ನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸಾರ್ವಜನಿಕರಲ್ಲಿ ಕೋರಿದ್ದಾರೆ.