ಬೀದರ್: ದೇವರಿಗೆ ಕೈ ಮುಗಿದು, ದೇವಸ್ಥಾನದ ಹುಂಡಿ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮುಖಕ್ಕೆ ಟವೆಲ್, ಮಾಸ್ಕ್ ಹಾಕಿಕೊಂಡು ಬಂದು ಹುಂಡಿ ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ದೇವಸ್ಥಾನದಲ್ಲಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಶ್ರೀರಂಗಪಟ್ಟಣದಲ್ಲಿ ನಿರ್ಬಂಧ – ನಿಷೇಧಾಜ್ಞೆ ಜಾರಿ
ಸ್ಪ್ಯಾನರ್ ಬಳಸಿ ಖದೀಮರು ಕೀಲಿ ಮುರಿಯಲು ಪ್ರಯತ್ನಿಸಿದ್ದಾರೆ. ಕೀಲಿ ಮುರಿಯದ ಪರಿಣಾಮ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ. ಹುಂಡಿಯಲ್ಲಿ ಹಣವನ್ನು ದೋಚಿ, ದೇವಸ್ಥಾನದ ಬಳಿಯ ಗುಡ್ಡದಲ್ಲಿ ಹುಂಡಿ ಎಸೆದು ಹೋಗಿದ್ದಾರೆ.
ಹುಂಡಿ ಹೊತ್ಯೊಯ್ಯುವ ದೃಶ್ಯ ಸಿಸಿಟಿವಿಯಲ್ಲೆ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ – ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ