– 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಲೂಟಿ
ಚಿಕ್ಕಬಳ್ಳಾಪುರ: ಗೃಹಪ್ರವೇಶ ಮಾಡ 40 ದಿನ ಕಳೆಯುವಷ್ಟರಲ್ಲೇ ಹೊಸ ಮನೆಗೆ ಕಳ್ಳರು ಕನ್ನ ಹಾಕಿ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ (Jewelry), ನಗದು ದೋಚಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ನಗರದ ಗುಂಡಪ್ಪ ಬಡಾವಣೆಯಲ್ಲಿ ನಡೆದಿದೆ.
ಶಿಡ್ಲಘಟ್ಟ ಜಿಲ್ಲಾ ಪಂಚಾಯಿತಿಯಲ್ಲಿ ನರೇಗ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗೇಂದ್ರ ಎಂಬುವವರು ತಮ್ಮ ಕುಟುಂಬದವರೊಂದಿಗೆ ಯುಗಾದಿ ಹಬ್ಬಕ್ಕಾಗಿ ಮನೆಗೆ ಬೀಗ ಜಡಿದು ಬಾಗೇಪಲ್ಲಿ ತಾಲ್ಲೂಕಿನ ಇದ್ಲಿವಾರಪಲ್ಲಿ ಗ್ರಾಮಕ್ಕೆ ಹೋಗಿದ್ದು, ಹಬ್ಬ ಮುಗಿಸಿ ಮನೆಗೆ ವಾಪಾಸ್ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಿ ಆಗೋವರೆಗೂ ನಾನು ಬಿಜೆಪಿಗೆ ವಾಪಸ್ ಆಗಲ್ಲ – ಯತ್ನಾಳ್ ಶಪಥ
ಕಳವಿಗೆ ಬಂದಿರೋ ಕಳ್ಳರು ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಮೊದಲು ಮನೆಯ ಬಾಗಿಲಿನ ಕಿಟಕಿ ಗಾಜು ಹೊಡೆದು ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಖಚಿತ ಪಡಿಸಿಕೊಂಡ ನಂತರ ಮನೆಯ ಮುಂಬಾಗಿಲು ಮುರಿದು ಒಳ್ಳನುಗ್ಗಿದ್ದಾರೆ.
ಮನೆಯಲ್ಲಿದ್ದ ಸರಿ ಸುಮಾರು 150 ಗ್ರಾಂ ಚಿನ್ನಾಭರಣಗಳು, 2 ಕೆಜಿ ಬೆಳ್ಳಿಯು ಆಭರಣಗಳು ಮತ್ತು ನಗದು 3 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?