ಚಿಕ್ಕಬಳ್ಳಾಪುರ: ನಗರದ ಚಿನ್ನದಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ನಿನ್ನೆಯಷ್ಟೇ ಚೆಮ್ಮನೂರ್ ಜ್ಯುವೆಲ್ಲರ್ಸ್ ದರೋಡೆ ಮಾಡಿದ್ರೆ ರವಿವಾರ ನಗರದ ತಿರುಮಲ ಜ್ಯುವೆಲ್ಲರ್ಸ್‍ನಲ್ಲಿ ಕಳ್ಳಿಯರು ತಮ್ಮ ಕೈಚಳಕ ತೋರಿದ್ದಾರೆ.
ಹೌದು ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್‍ನಲ್ಲಿರುವ ತಿರುಮಲ ಜ್ಯುವೆಲ್ಲರ್ಸ್‍ಗೆ ಬಂದ ನಾಲ್ವರು ಕಳ್ಳಿಯರು 6 ಜೊತೆ ಬೆಳ್ಳಿ ಕಾಲುಂಗರಗಳನ್ನ ಕಳ್ಳತನ ಮಾಡಿದ್ದಾರೆ.
ನಾಲ್ವರು ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ಇಬ್ಬರು ಮಹಿಳೆಯರು ಕುಳಿತುಕೊಂಡಿದ್ದಾರೆ. ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದಿದ್ದರಿಂದ ಇಬ್ಬರು ವ್ಯಾಪಾರದ ತರ ಮಾತು ಆಡುತ್ತಲೇ ಬೆಳ್ಳಿ ಕಾಲು ಚೈನುಗಳನ್ನ ಕೆಳಗೆ ಬಿಸಾಡಿದ್ದು, ಅವುಗಳನ್ನು ಅಂಗಡಿಯಲ್ಲಿ ಕೂತಿದ್ದ ಇಬ್ಬರು ಮಹಿಳೆಯರು ಎತ್ತಿಕೊಂಡು ಕಳವು ಮಾಡಿದ್ದಾರೆ.
ಇನ್ನೂ ಕಳವು ಮಾಡಿದ ಬೆಳ್ಳಿ ಕಾಲು ಚೈನುಗಳನ್ನ ಎತ್ತಕೊಂಡು ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದ್ರೆ ಕಾಲು ಚೈನುಗಳು ಕಡಿಮೆ ಇದ್ದ ಕಾರಣ ಅನುಮಾಮಗೊಂಡ ಮಾಲೀಕ ಅಂಗಡಿಯಲ್ಲೇ ಉಳಿದ ಇಬ್ಬರನ್ನ ಪ್ರಶ್ನೆ ಮಾಡಿದಾಗ ಕಳ್ಳತನ ಮಾಡಿದ ಪ್ರಕರಣ ಬಯಲಾಗಿದೆ.
ಹೀಗಾಗಿ ಇಬ್ಬರು ಕಳ್ಳಿಯರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಇನ್ನಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಅಂದ ಹಾಗೆ ಪೊಲೀಸರ ಬಳಿ ತಾವು ಗೌನಿಪಲ್ಲಿ ಮೂಲದವರು ತಮ್ಮ ಹೆಸರು ಶ್ವೇತಾ ಹಾಗೂ ಲಕ್ಷ್ಮೀದೇವಮ್ಮ ಅಂತ ತಿಳಿಸಿದ್ದು, ಪರಾರಿಯಾದ ಮತ್ತೊಬ್ಬರು ನಿರ್ಮಲಮ್ಮ ಹಾಗೂ ಶಾರದ ಅಂತ ತಿಳಿಸಿದ್ದಾರೆ. ಇನ್ನೂ ಈ ಕಳ್ಳಿಯರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
https://youtu.be/WM-UpC-IpOE