ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ (Gundlupete) ಪಟ್ಟಣದಲ್ಲಿ ಮನೆಗಳ್ಳತನ ಮುಂದುವರಿದಿದೆ. ಕಳೆದೆರೆಡು ದಿನಗಳ ಹಿಂದೆ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಳ್ಳತನ ತಡರಾತ್ರಿ ನಡೆದಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.
ಪಟ್ಟಣದ 12ನೇ ವಾರ್ಡಿನ ನಿವಾಸಿ ವರದರಾಜು ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಖದೀಮರು ಮನೆಯ ಬೀಗ ಹೊಡೆದು ಬೀರುವಿನಲ್ಲಿದ್ದ 97 ಸಾವಿರ ನಗದು ಹಾಗೂ 10 ಗ್ರಾಂ ಚಿನ್ನದ ಎರಡು ಓಲೆಗಳನ್ನು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ದೇವರ ಭಜನೆಯಲ್ಲಿ ಮಗ್ನರಾಗಿದ್ದಾಗ ಕಿಟಿಕಿಯಿಂದ ಮಹಿಳೆಯ ಸರ ಕದ್ದು ಪರಾರಿ – FIR ದಾಖಲು
ಮಾಲೀಕರು ದಸರಾ ಹಬ್ಬದ ಹಿನ್ನೆಲೆ ಮನೆಯ ಬಾಗಿಲು ಹಾಕಿ ಕೆ.ಆರ್. ನಗರಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಮಾಹಿತಿ ಅರಿತ ಕಳ್ಳರು ಮನೆಯ ಒಳಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.
ಸೋಮವಾರ ಮಧ್ಯಾಹ್ನ ಮಾಲೀಕರು ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಎರಡು ದಿನದ ಹಿಂದೆ ಕೂಡ ಆಟೋ ಚಾಲಕನ ಮನೆ ಬಾಗಿಲು ಮೀಟಿ ನಗದು, ಚಿನ್ನ ಕದ್ದೊಯ್ದಿದ್ದರು. ಪದೇ ಪದೆ ಕಳವಿಗೆ ಜನರು ಕಂಗಲಾಗಿದ್ದಾರೆ. ಇದನ್ನೂ ಓದಿ: ರಾಯಚೂರು| ಕಾರು, ಲಾರಿ ಮಧ್ಯೆ ಭೀಕರ ಅಪಘಾತ – ಮೂವರ ದುರ್ಮರಣ