ಚಾಮರಾಜನಗರ: ಮಾಜಿ ಸಚಿವ ಎನ್ ಮಹೇಶ್ (N Mahesh) ಮನೆಯಲ್ಲಿ ಕಳ್ಳತನ ನಡೆದಿದೆ. ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿರುವ ಮಹೇಶ್ ಮನೆಗೆ ನುಗ್ಗಿ ಕಳ್ಳರು ಹಣ ದೋಚಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಕಳ್ಳತನಕ್ಕೆ ಸಂಚು ನಡೆಸಿದ ಖದೀಮರು, ಬಾಗಿಲ ಬೀಗ ಮುರಿದು ಸಚಿವನ ಮನೆಗೆ ನುಗ್ಗಿ ಮನೆಯಲ್ಲಿದ್ದ 50 ಸಾವಿರ ರೂ. ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಆತ್ಮರಕ್ಷಣೆಗಾಗಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ – ಪ್ರತ್ಯುತ್ತರವಾಗಿ 300 ರಾಕೆಟ್ ಹಾರಿಸಿದ ಹಿಜ್ಬುಲ್ಲಾ
ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ- ನವವಿವಾಹಿತೆ ಆತ್ಮಹತ್ಯೆ