Connect with us

Districts

ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

Published

on

ಯಾದಗಿರಿ/ರಾಯಚೂರು: ಅಹಮದಾಬಾದ್- ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಖದೀಮ ಕಳ್ಳರು ಇಂದು ನಸುಕಿನ ಜಾವ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ರೈಲು ವಾಡಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ವಾಡಿ-ಯಾದಗಿರಿ ಮಧ್ಯೆ ಗಾಡಿ ಹತ್ತಿದ ಕಳ್ಳರು ಚಾಕು ತೋರಿಸಿ ನಾಲ್ವರು ಪ್ರಯಾಣಿಕರನ್ನು ದೋಚಿದ್ದಾರೆ.

 

ಜೇಬುಗಳಿಗೆ ಕತ್ತರಿಹಾಕಿದ್ದು 50 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಎಸ್-5 ಬೋಗಿಯಲ್ಲಿ ಮಹಿಳೆಯೊಬ್ಬರ ಸರ ಕದಿಯಲು ಮುಂದಾದಾಗ ಮಹಿಳೆ ಕೂಗಿಕೊಂಡಿದ್ದಾರೆ. ರಾಮಚಂದ್ರ ಎಂಬುವವರಿಗೆ ಚಾಕು ತೋರಿಸಿ ಬೆದರಿಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ.

ಕಳ್ಳರನ್ನ ಹಿಡಿಯಲು ಮುಂದಾದ ಪ್ರಯಾಣಿರೊಬ್ಬರಿಗೆ ಥಳಿಸಿ ಕಳ್ಳರು ಪರಾರಿಯಾಗಿದ್ದಾರೆ. ಮೂರು ಜನ ಕಳ್ಳರ ಗುಂಪು ಈ ಕೃತ್ಯವೆಸಗಿದೆ. ಕಳ್ಳತನ ಹಿನ್ನೆಲೆ ಯಾದಗಿರಿ ನಿಲ್ದಾಣಕ್ಕೆ 5:20 ಆಗಮಿಸಿದ ರೈಲ್ವೆ ಗಾಡಿ 50 ನಿಮಿಷ ನಿಲ್ದಾಣದಲ್ಲಿಯೇ ನಿಂತು ತಡವಾಗಿ ತೆರಳಿದೆ.

ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *