ಬೆಳಗಾವಿ: ಚಿಕ್ಕ ಮಕ್ಕಳನ್ನು ಬಳಸಿಕೊಂಡು, ಮಹಿಳೆಯರ ಗಮನನವನ್ನು ಬೇರೆಡೆಗೆ ಸೆಳೆದು ಕಳ್ಳತನ ನಡೆಸುತ್ತಿರುವ ಘಟನೆ ಚಿಕ್ಕೋಡಿ ಪಟ್ಟಣದ ಕೇಸಿ ರೋಡ್ ನಲ್ಲಿ ನಡೆದಿದೆ.
ಚಿಕ್ಕೋಡಿ ಪಟ್ಟಣದ ಮಹಾದೇವಿ ಗಸ್ತೆ ಎಂಬುವರು ಇಂದು ಕೆವಿಜಿ ಬ್ಯಾಂಕ್ ನಿಂದ 80 ಸಾವಿರ ರೂ. ಹಣವನ್ನು ಡ್ರಾ ಮಾಡಿದ್ದರು. ಹಣ ಡ್ರಾ ಮಾಡಿ ಹೊರಗಡೆ ಬರುವ ವೇಳೆ ಮೈಮೇಲೆ ಗಲೀಜು ಎರಚಿದ್ದಾರೆ. ಗಲೀಜು ಬಿದ್ದಿದೆ ಎಂದು ಹೇಳಿ ಅವರಿಗೆ ನೀರಿನಲ್ಲಿ ತೊಳೆದು ಕೊಳ್ಳಲು ಹೇಳಿದ್ದಾರೆ. ಅವರು ತಮ್ಮ ಮೈಮೇಲೆ ಬಿದ್ದ ಗಲೀಜನ್ನು ತೋಳೆದು ಕೊಳ್ಳುವಾಗ ಸಣ್ಣ ಹುಡುಗನೊಬ್ಬ ಬಂದು ಅವರ ಹಣದ ಬ್ಯಾಗ್ ಅನ್ನು ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾನೆ.
Advertisement
ಮಹಿಳೆಯು ಹತ್ತಿರದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಹೋಗಿದ್ದಾಗ ಪೊಲೀಸರಿಗೆ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದೆ.