ಚಿಕ್ಕಮಗಳೂರು: ಮಲೆನಾಡ ಗಾಂಧಿ ಎಂದೇ ಖ್ಯಾತಿಯಾಗಿರುವ ದಿ.ಹೆಚ್.ಜಿ. ಗೋವಿಂದೇಗೌಡರ (H.G Govindegowda) ಪುತ್ರ ವೆಂಕಟೇಶ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಕೊಪ್ಪ (Koppa) ಪೊಲೀಸರು ಬಂಧಿಸಿ,ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ (Gold) ಮತ್ತು ನಗದನ್ನು (Money) ವಶಕ್ಕೆ ಪಡೆದಿದ್ದಾರೆ.
ಆ.21ರಂದು ಕೊಪ್ಪ ಪಟ್ಟಣದ ಹರಂದೂರು ಗ್ರಾಮದಲ್ಲಿರುವ ವೆಂಕಟೇಶ್ ಅವರ ಮನೆಯಲ್ಲಿ 15 ದಿನಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ್ದ ನೇಪಾಳ ಮೂಲದ ದಂಪತಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಕಳ್ಳತನ ಮಾಡಿದ ನೇಪಾಳ ಮೂಲದ ಖದೀಮರ ಗ್ಯಾಂಗ್ ಪರಾರಿಯಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಚಿಕ್ಕಮಗಳೂರು ಪೊಲೀಸರು, ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಮಹಾರಾಷ್ಟ್ರ ಪೊಲೀಸರ ನೆರವಿನೊಂದಿಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಮಾಜಿ ಸಚಿವರ ಮನೆಯಲ್ಲಿ 7 ಲಕ್ಷ ನಗದು, ಚಿನ್ನಾಭರಣ ದೋಚಿದ ನೇಪಾಳಿ ದಂಪತಿ
ವಶಪಡಿಸಿಕೊಂಡ ಈ ಎರಡು ವಾಹನಗಳಲ್ಲಿ ಕೂಲಂಕುಷವಾಗಿ ಶೋಧ ಕಾರ್ಯ ನಡೆಸಿದಾಗ, ಮಹತ್ವದ ಸ್ವತ್ತುಗಳು ಪತ್ತೆಯಾಗಿವೆ. 595.5 ಗ್ರಾಂ ತೂಕದ ಚಿನ್ನಾಭರಣ, 589 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ 3,41,150 ರೂ. ನಗದು ಪತ್ತೆಯಾಗಿದೆ.
ಕಾರಿನ ಮಾಲೀಕರು ಕೋರ್ಟ್ ಅನುಮತಿ ಪಡೆದು ಸೀಜ್ ಆಗಿದ್ದ ಕಾರುಗಳ ರಿಲೀಸ್‌ಗೆ ಬಂದಾಗ ಪೊಲೀಸರು ಕಾರನ್ನ ಪರೀಕ್ಷಿಸಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯ ಸ್ಟೆಪ್ನಿ ಜಾಗದಲ್ಲಿ ಚಿನ್ನ-ಬೆಳ್ಳಿ-ಹಣದ ಚೀಲ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕತ್ತು ಕೊಯ್ದು ಹತ್ಯೆ ಕೇಸ್ – ಪೊಲೀಸ್ ಅಂತಾ ಬೆದರಿಸಿ ಕಾಲೇಜು ವಿದ್ಯಾರ್ಥಿಗಳೊಂದಿಗೆ `ಮಿಷನ್ ಯಾಮಿನಿ’ ವಾಟ್ಸಪ್ ಗ್ರೂಪ್ ಮಾಡಿದ್ದ ಹಂತಕ

