ಮಡಿಕೇರಿ: ಕೆಲಸಕ್ಕೆಂದು ಬಂದ ಹೊರ ರಾಜ್ಯಗಳ ಕಾರ್ಮಿಕರಿಂದಲೇ ದರೋಡೆ ಪ್ರಕರಣಗಳು ಶಾಂತಿಪ್ರಿಯ ಜಿಲ್ಲೆ ಕೊಡಗಿನಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮನೆ ದರೋಡೆ ಮಾಡಿದ್ದ ಅಸ್ಸಾಂ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮೇಕೂರು ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಎಂಬುವರ ಮನೆ ದರೋಡೆ ನಡೆಸಿದ್ದ ಅಸ್ಸಾಂ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಜೂ.12ರಂದು ಮನೆಗೆ ಸಾಮಾಗ್ರಿ ತರಲೆಂದು ಪತ್ನಿಯ ಜೊತೆ ಪಾಲಿಬೆಟ್ಟಕ್ಕೆ ತೆರಳಿದ್ದರು. ಮನೆ ಸಾಮಗ್ರಿ ಖರೀದಿಸಿ ಮಧ್ಯಾಹ್ನದ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯವರಿಗೆ ಶಾಕ್ ಕಾದಿತ್ತು. ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕಪಾಟಿನಲ್ಲಿದ್ದ ಆರಭರಣಗಳೆಲ್ಲ ಮಾಯವಾಗಿದ್ದವು. ಮನೆಯಲ್ಲಿದ್ದ ಅಂದಾಜು 9-10 ಲಕ್ಷ ರೂ. ವೆಚ್ಚದ ಚಿನ್ನಾಭರಣಗಳನ್ನು ಖದೀಮರು ದೋಚಿ ಪರಾರಿಯಾಗಿದ್ದರು. ಮನೆ ಕಳ್ಳತನದ ಬಗ್ಗೆ ಪೊಲೀಸರಿಗೆ ಮನೆ ಮಾಲೀಕ ಸುಬ್ಬಯ್ಯ ದೂರು ನೀಡಿದ್ದರು.
Advertisement
Advertisement
ಸುಬ್ಬಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳಿಗಾಗಿ ತಂಡ ಮಾಡಿಕೊಂಡು ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಒಂದಷ್ಟು ಜನರ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ ಕಳ್ಳರು ಕರ್ನಾಟಕದವರಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.
Advertisement
ಪ್ರಕರಣದಲ್ಲಿ ಭಾಗಿಯಾಗಿದ್ದವರೂ ಜಿಲ್ಲೆಗೆ ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದವರೆಂದು ತಿಳಿದ ಪೊಲೀಸರು ಕೂಡಲೇ ಕಾರ್ಯಪ್ರವೃತರಾಗಿ ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಇಬ್ಬರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿದರೆ, ಇನ್ನಿಬ್ಬರು ಆರೋಪಿಗಳು ಪಾರಾರಿಯಾಗಿದ್ದಾರೆ.
Advertisement
ಕುರ್ಬನ್ ಅಲಿ, ಮಹಿರುದ್ದೀನ್ ಅಲಿ ಬಂಧಿತ ಆರೋಪಿಗಳು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು ಇವರ ಬಳಿ ಇದ್ದ 11,70,000 ರೂ. ಮೌಲ್ಯದ 247.1 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಇವರೊಂದಿಗೆ ಇದ್ದ ಇನ್ನಿಬ್ಬರು ತಲೆಮರಿಸಿಕೊಂಡಿದ್ದು, ಅವರಿಗಾಗಿ ಕೊಡಗು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಶಿವಸೇನೆ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡ ರೆಬೆಲ್ ಶಾಸಕರ ಗುಂಪು
ಜಿಲ್ಲೆಯಲ್ಲಿ ಮೊದಲೇನು ಹೆಚ್ಚಿನ ಕಳ್ಳತನವಾಗಲಿ ದರೋಡೆ ಪ್ರಕರಣವಾಗಲಿ ನಡೆಯುತ್ತಿರಲಿಲ್ಲ. ಆದರೆ ಇದೀಗ 10 ಕೊಲೆ, ದರೋಡೆ ಪ್ರಕರಣಗಳು ನಡೆದಲ್ಲಿ 7/8 ಪ್ರಕರಣದಲ್ಲಿ ಅಸ್ಸಾಂ ಮೂಲದವರೆ ಇರುತ್ತಾರೆ. ಮನೆ ತೋಟದ ಕೆಲಸಕ್ಕೆ ಹೋಗಿ ಅಲ್ಲಿನ ಜನರ ಚಲನವಲನಗಳನ್ನು ನೋಡಿಕೊಂಡು ಯಾರು ಇಲ್ಲದ ಸಮಯದಲ್ಲಿ ಮನೆಗಳಿಗೆ ಕನ್ನಹಾಕಿ ಊರು ಬಿಟ್ಟು ತಮ್ಮೂರು ಸೇರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡದೊಂದು ಅಪಾಯ ಎದರಾಗುವ ಮುನ್ನ ನಾವೇ ಎಚ್ಚೆತುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಜಿಲ್ಲಾಡಳಿತ ಪೊಲೀಸ್ ಇಲಾಖೆ ತೋಟದ ಮಾಲೀಕರಿಗೆ ನಿಮ್ಮ ತೋಟದ ಅಸ್ಸಾಂ ಕಾರ್ಮಿಕರ ವಿವರವನ್ನು ನೀಡುವಂತೆ ಹೇಳಿದ್ರು ಕೂಡ ಕ್ಯಾರೆ ಎನ್ನುತ್ತಿಲ್ಲ. ಇನ್ನಾದರೂ ಹೊರ ರಾಜ್ಯದ ಕಾರ್ಮಿಕರಿಂದ ಅಪಾಯ ಎದುರಾಗುವ ಮುನ್ನ ಕೊಡಗಿನ ಜನತೆಯೆ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ದೊಡ್ಡದೊಂದು ಅಪಾಯದ ಸುಳಿಯಲ್ಲಿ ಸಿಲುಕುವುದರಲ್ಲಿ ಎರಡು ಮಾತ್ತಿಲ್ಲ. ಇದನ್ನೂ ಓದಿ: ಕುಟುಂಬ ರಾಜಕಾರಣ ಮಾಡೋರಿಗೆ ಮಹಾರಾಷ್ಟ್ರದಲ್ಲಿ ತಕ್ಕ ಪಾಠವಾಗಿದೆ: ಪ್ರತಾಪ್ ಸಿಂಹ