ಸೋನಂ ಕಪೂರ್ ಮನೆಯಲ್ಲಿ ಕಳ್ಳತನ: 2.4 ಕೋಟಿ ಕದ್ದದ್ದು ಅವರ ಮನೆಯಲ್ಲಿದ್ದವರೆ

Public TV
1 Min Read
sonam kapor

ಬಾಲಿವುಡ್ ನ ಖ್ಯಾತ ನಟಿ ಸೋನಂ ಕಪೂರ್ ಮನೆಯಲ್ಲಿ ಕಳ್ಳತನವಾಗಿದ್ದ ವಿಷಯ ಭಾರೀ ಸದ್ದು ಮಾಡಿತ್ತು. ಅದರಲ್ಲೂ ಬರೋಬ್ಬರಿ 2.4 ಕೋಟಿ ಬೆಲೆ ಬಾಳುವ ಚಿನ್ನಾಭರಣಗಳು ಅವಾಗಿದ್ದರಿಂದ ಯಾರು ಕಳ್ಳತನ ಮಾಡಿರಬಹುದು ಎನ್ನುವ ಅನುಮಾನ ಎಲ್ಲರಲ್ಲೂ ವ್ಯಕ್ತವಾಗಿತ್ತು. ಈಗ ಆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

anil and sonam kapoor

ಮನೆಯಲ್ಲಿ ಸೆಕ್ಯೂಟಿರಿ ಗಾಡ್ಸ್, ಸಿಸಿಟಿವಿ ಹಾಗೂ ಇತರ ಕೆಲಸಗಾರರು ಇರುವಾಗ, ಯಾರು ಬಂದು ಅಷ್ಟೊಂದು ಬೆಲೆ ಬಾಳುವ ಬಂಗಾರವನ್ನು ತಗೆದುಕೊಂಡು ಹೋಗುತ್ತಾರೆ ಎನ್ನುವ ತಲೆನೋವಿನ ಮಧ್ಯೆಯೇ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದರು. ಸತತ ತನಿಖೆಯ ಪರಿಣಾಮವಾಗಿ ಚಿನ್ನಾಭರಣ ಕದ್ದ ಕಳ್ಳಿ ಸಿಕ್ಕಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸೋನಂ ಕಪೂರ್ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ಅಪರ್ಣ ರೌತ್ ವಿಲ್ಸನ್ ಎನ್ನಲಾಗುತ್ತಿದೆ. ತನ್ನ ಪತಿ ನರೇಶ್ ಕುಮಾರ್ ಸಾಗರ್ ಜತೆ ಸೇರಿ ಅಪರ್ಣ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

sonam kapur 2

ಫೆ.11 ರಂದೇ ನರ್ಸ್ ಅಪರ್ಣ ಮತ್ತು ಅವರ ಪತಿ ನರೇಶ್ ಕುಮಾರ್ ಕಳ್ಳತನ ಮಾಡಿದ್ದರು. ಸೋನಂ ಮನೆಯವರಿಗೆ ತಡವಾಗಿ ವಿಷಯ ಗೊತ್ತಾಗಿತ್ತು. ಫೆ.23 ರಂದು ಅವರು ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದದ್ರು. ನಂತರ ಸೋನಂ ಕಪೂರ್ ಅತ್ತೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಷ್ಟೂ ಕೆಲಸಗಾರರ ವಿಚಾರಣೆ ನಡೆಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *