ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

Advertisements

ಬಳ್ಳಾರಿ: ತಾಯಿ ಮಗಳು ಇಬ್ಬರು ಸೇರಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿರುವ ಘಟನೆ ಗಣಿ ನಾಡಿನಲ್ಲಿ ನಡೆದಿದೆ.

Advertisements

ಸಾಮಾನ್ಯವಾಗಿ ಮಕ್ಕಳು ಕಳ್ಳತನ ಮಾಡಿದರೆ, ತಪ್ಪು ದಾರಿ ಹಿಡಿದರೆ ಹೆತ್ತವರು ಮಕ್ಕಳನ್ನು ಸರಿದಾರಿಗೆ ತರಬೇಕು. ಆದರೆ ಬಳ್ಳಾರಿ ಇನ್ ಫ್ಯಾಂಟ್ರಿ ರಸ್ತೆಯಲ್ಲಿ ಇರುವ ಸೂಪರ್ ಮಾರ್ಕೆಟ್‌ನಲ್ಲಿ ವ್ಯತಿರಿಕ್ತ ಎನ್ನುವಂತೆ ಮಗಳಿಗೆ ತಾಯಿ ಕಳ್ಳತನ ಮಾಡಲು ಸಾಥ್ ಕೊಟ್ಟಿದ್ದಾಳೆ. ಇವರಿಬ್ಬರು ವಸ್ತುಗಳ ಖರೀದಿ ನೆಪದಲ್ಲಿ ಅಂಗಡಿ ಒಳಗೆ ಬಂದಿದ್ದಾರೆ.

Advertisements

ಬಳಿಕ ತಮಗೆ ಬೇಕಾದ ವಸ್ತುಗಳನ್ನು ಹುಡುಕಿದ್ದಾರೆ. ಹುಡುಕಾಟ ನೆಪದಲ್ಲಿ ಬೇಕಾದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ತಾಯಿ ಬೇಕಾದ ವಸ್ತುಗಳನ್ನು ಕದ್ದು ಮಗಳ ಬಳಿ ನೀಡಿದ್ದಾರೆ. ಆಗ ಮಗಳು ಅದನ್ನು ಬಟ್ಟೆಯಲ್ಲಿ ಹಾಕಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅಂಗಡಿಯಲ್ಲಿ ಹಾಕಲಾದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಇದು ಮೊದಲನೇ ಬಾರಿ ಮಾಡಿದ ಕಳ್ಳತನವಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ತಿಂಗಳ ಡಿ. 17ರಂದು ಇದೇ ರೀತಿ ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದರು. ನಂತರ ಮರುದಿನ ಅವರೇ ಅದೇ ಅಂಗಡಿಗೆ ಬಂದು ಮತ್ತೊಂದು ಸಾರಿ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

Advertisements

ಈ ಬಗ್ಗೆ ಅಂಗಡಿ ಮಾಲೀಕರು ಬಳ್ಳಾರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತಾಯಿ, ಮಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.

Advertisements
Exit mobile version