ಪೊಲೀಸ್ ಅಧಿಕಾರಿಯ ಕಾರಿನಲ್ಲಿ ಕಳ್ಳತನ

Public TV
1 Min Read
crime

ಬೆಂಗಳೂರು: ಕಳ್ಳರು ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿದ ಘಟನೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ನಡೆದಿದೆ.

ಪೊಲೀಸ್ ಅಧಿಕಾರಿ ಅರುಣ್ ಸಾಳುಂಕೆ ಎಂಬವರ ಕಾರಿನಲ್ಲಿ ಕಳ್ಳತನ ಆಗಿದೆ. ಅಧಿಕಾರಿಯು ಕಾಂಗ್ರೆಸ್ ಕಚೇರಿ ಬಳಿ ಕಾರು ನಿಲ್ಲಿಸಿ ಆನಂದ ರಾವ್ ಸರ್ಕಲ್ ಕಡೆ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ಖದೀಮರು ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

Police Jeep

ಖದೀಮರು ಕಾರಿನ ಹಿಂಬದಿ ಗ್ಲಾಸ್ ಒಡೆದು ಲ್ಯಾಪ್ ಟಾಪ್, 3 ಪೆನ್ ಡ್ರೈವ್, 50 ಸಾವಿರ ನಗದು ಹಣ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಅರುಣ್ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೈಗ್ರೌಂಡ್ಸ್ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ. ಇದನ್ನೂ ಓದಿ: ನಾನೇಕೆ ಪ್ರಧಾನಿ ಮಾತನ್ನ ಕೇಳಬೇಕು- ಮೋದಿಗೆ ರಾಗಾ ತಿರುಗೇಟು

Share This Article