Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತೀರ್ಥರೂಪ ತಂದೆಯವರಿಗೆ: ಭಾವನಾತ್ಮಕ ಕಥೆ ಹೇಳಿದ ನಿರ್ದೇಶಕ ಜಗನ್ನಾಥ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ತೀರ್ಥರೂಪ ತಂದೆಯವರಿಗೆ: ಭಾವನಾತ್ಮಕ ಕಥೆ ಹೇಳಿದ ನಿರ್ದೇಶಕ ಜಗನ್ನಾಥ್

Cinema

ತೀರ್ಥರೂಪ ತಂದೆಯವರಿಗೆ: ಭಾವನಾತ್ಮಕ ಕಥೆ ಹೇಳಿದ ನಿರ್ದೇಶಕ ಜಗನ್ನಾಥ್

Public TV
Last updated: December 9, 2025 3:14 pm
Public TV
Share
3 Min Read
Theertharoopa Thandeyavarige
SHARE

ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಈಗ ಅವರು ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರು ಮಾಡುತ್ತದೆ. ಅದು ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಶಯದ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಕಂಟೆಂಟ್‌ನೊಂದಿಗೆ ಬಂದಿದ್ದಾರೆ. ಈ ಕಥೆಗೆ ತೀರ್ಥರೂಪ ತಂದೆಯವರಿಗೆ ಎಂಬ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ನಿನ್ನೆ ಟ್ರೇಲರ್ ಲಾಂಚ್ ಕಾರ್ಯಕ್ರಮ ಜರುಗಿತು. ಹೊಂದಿಸಿ ಬರೆಯಿರಿ ಚಿತ್ರತಂಡ ತೀರ್ಥರೂಪ ತಂದೆಯವರಿಗೆ ಟ್ರೇಲರ್ ಬಿಡುಗಡೆ ಮಾಡಿ ಶುಭಹಾರೈಸಿದರು.

ಟ್ರೇಲರ್ ಬಿಡುಗಡೆ ಬಳಿಕ ಹಿರಿಯ ನಟಿ ಸಿತಾರಾ ಮಾತನಾಡಿ, ನನಗೆ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಕೊಟ್ಟಿದ್ದಾರೆ. ನಿಮಗೆ ನನ್ನ ಪಾತ್ರ ಇಷ್ಟವಾಗುತ್ತದೆ. ಕಥೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ನಾನು ನನ್ನ ಕನಸು ಆದ್ಮೇಲೆ ರಾಜೇಶ್ ನಟರಂಗ ಅವರ ಜೊತೆ ನಟಿಸಿದ್ದೇನೆ ಎಂದರು. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, ಇದು ಬೇರೆ ಕಥೆಗೆ ಇಟ್ಟ ಟೈಟಲ್. ನಾನು ನಿಹಾರ್ ಭೇಟಿಯಾದಾಗ ಕಥೆ ಬಗ್ಗೆ ಚರ್ಚೆ ಮಾಡಿದೆವು. ಥಿಯೇಟರ್‌ಗೆ ಪ್ರೇಕ್ಷಕರನ್ನು ಆಕರ್ಷಿಸಲು ಟೈಟಲ್ ಬಹಳ ಮುಖ್ಯ. ಅಲ್ಲದೇ ಜನಕ್ಕೆ ಹತ್ತಿರವಾಗಿ ಇರಬೇಕು ಹಾಗೂ ಕಥೆಗೆ ಅದು ಸೂಟ್ ಆಗುವ ರೀತಿಯೂ ಇರಬೇಕು. ಹೀಗಾಗಿ, ಈ ಚಿತ್ರಕ್ಕೆ ಇದೇ ಟೈಟಲ್ ಇಟ್ಟೆವು. ತೀರ್ಥರೂಪ ತಂದೆಯವರಿಗೆ ತುಂಬಾ ಒಳ್ಳೆ ಟೈಟಲ್ ಎಂದು ಎಲ್ಲರೂ ಹೇಳಿದರು. ಚಿತ್ರದ ಪ್ರಮುಖ ಪಾತ್ರಧಾರಿ ಹುಡುಕಾಟದಲ್ಲಿ ಕೊನೆಗೆ ಏನೂ ಸಿಗಲಿದೆ ಎನ್ನುವುದು ಚಿತ್ರದ ಆಶಯ. ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಎಲ್ಲಾ ಪಾತ್ರಗಳು ಸಹಜವಾಗಿ, ಉತ್ತಮವಾಗಿ ಮೂಡಿಬಂದಿದೆ ಎನಿಸುತ್ತದೆ ಎಂದರು.

Theertharoopa Thandeyavarige 1

ನಟ ನಿಹಾರ್ ಮುಖೇಶ್, ನಾನು ಮೂಲತಃ ಮೈಸೂರು ಹುಡ್ಗ. ಸೀರಿಯಲ್ ಮೂಲಕ ನನ್ನ ಜರ್ನಿ ಶುರುವಾಯ್ತು. ಹೊಂದಿಸಿ ಬರೆಯಿರಿ ಚಿತ್ರ ನೋಡಿದ ಮೇಲೆ ನಿರ್ದೇಶಕ ಜಗನ್ನಾಥ ಅವರ ಜೊತೆ ಕೆಲಸ ಮಾಡಬೇಕು ಎಂದುಕೊಂಡೆ. ಅದು ನನಸಾಗಿದೆ. ನಾನು ಪೃಥ್ವಿ ಎಂಬ ಪಾತ್ರ ಮಾಡಿದ್ದೇನೆ. ಪಾತ್ರದಲ್ಲಿ ತುಂಬಾ ಎಮೋಷನ್ ಪ್ಲೇ ಆಗಿದೆ ಎಂದರು.

ಚಿತ್ರದಲ್ಲಿ ನಾಯಕ ನಿಹಾರ್ ಮುಕೇಶ್ಗೆ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಚಿತ್ರವು ‘ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿದ್ದು, ರಾಮೇನಹಳ್ಳಿ ಜಗನ್ನಾಥ್ ಅವರೇ ಕಥೆ ಬರೆದಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ‘ಸಂಡೇ ಸಿನಿಮಾಸ್’ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ರವಿಚಂದ್ರ ಎ.ಜೆ ಅವರು ‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ. ‘ತೀರ್ಥರೂಪ ತಂದೆಯವರಿಗೆ’ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ ತೆಲುಗು ಆವೃತ್ತಿಯು ‘ಪ್ರಿಯಮೈನ್ ನಾನಾಕು’ ಎಂಬ ಶೀರ್ಷಿಕೆಯೊಂದಿಗೆ ರಿಲೀಸ್ ಆಗಲಿದೆ. ಚಿತ್ರಕ್ಕೆ ದೀಪಕ್ ಯರಗೇರಾ ಅವರ ಛಾಯಾಗ್ರಹಣ, ಜೋ ಕಾಸ್ಟ್ ಸಂಗೀತ ಸಂಯೋಜನೆ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

ತೀರ್ಥರೂಪ ತಂದೆಯವರಿಗೆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜನವರಿ 1ರಂದು ಸಿನಿಮಾವನ್ನು ಚಿತ್ರಮಂದಿರಗಳಿಗೆ ತರಲು ಚಿತ್ರತಂಡ ಸಜ್ಜಾಗಿದೆ. ಇಡೀ ಕುಟುಂಬ ಕುಳಿತು ನೋಡುವ ಕಾಡುವ ಕಥೆಯನ್ನು ರಾಮೇನಹಳ್ಳಿ ಜಗನ್ನಾಥ್ ತೀರ್ಥರೂಪ ತಂದೆಯವರಿಗೆ ಚಿತ್ರದ ಮೂಲಕ ಹೇಳಲಿದ್ದಾರೆ. ಹೊಸ ವರ್ಷವನ್ನು ಹೊಸ ಕಥೆಯೊಂದಿಗೆ ಪ್ರೇಕ್ಷಕರು ಸ್ವಾಗತ ಮಾಡಲಿದ್ದಾರೆ.

TAGGED:Ramenahalli JagannathsandalwoodTheertharoopa Thandeyavarigeತೀರ್ಥರೂಪ ತಂದೆಯವರಿಗೆರಾಮೇನಹಳ್ಳಿ ಜಗನ್ನಾಥ್
Share This Article
Facebook Whatsapp Whatsapp Telegram

Cinema news

PRAJWAL DEVARAJ 2
ಸಹೋದರನ ಚಿತ್ರಕ್ಕೆ ನಿರ್ಮಾಪಕನಾದ ಪ್ರಜ್ವಲ್ ದೇವರಾಜ್ – ಚಿತ್ರದ ಫಸ್ಟ್ ಲುಕ್ ಲಾಂಚ್
Cinema Latest Sandalwood Top Stories
actor mayur patel car accident
ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ; ನಟ ಮಯೂರ್ ಪಟೇಲ್ ವಿರುದ್ಧ FIR
Cinema Crime Latest Main Post Sandalwood
Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ʻಹೆಣ್ಣು ದೆವ್ವʼ ಅಂತ ಅಪಮಾನ – ರಣವೀರ್ ಸಿಂಗ್‌ ವಿರುದ್ಧ FIR
Bengaluru City Cinema Crime Latest Main Post
Suri Anna 2
ಹರೀಶ್ ರಾಯ್ ನಟಿಸಿದ ಕೊನೆ ಚಿತ್ರ ಸೂರಿ ಅಣ್ಣ ಟ್ರೈಲರ್ ಬಿಡುಗಡೆ
Cinema Latest Main Post Sandalwood

You Might Also Like

man quits a Rs 40000 job in Bengaluru and works as a areca nut tree climber in his hometown Kalasa 1
Districts

ಬೆಂಗಳೂರಿನಲ್ಲಿ 40 ಸಾವಿರದ ಉದ್ಯೋಗಕ್ಕೆ ಗುಡ್‌ಬೈ – ಊರಿನಲ್ಲಿ ಅಡಿಕೆ ಕೊನೆಕಾರನ ಕೆಲಸಕ್ಕೆ ಜೈ

Public TV
By Public TV
16 minutes ago
Gadag 4 1
Districts

ಐತಿಹಾಸಿಕ ಲಕ್ಕುಂಡಿಯಲ್ಲಿ ಅಪರೂಪದ ತ್ರಿಮುಖ ನಾಗಶಿಲೆ ಪತ್ತೆ

Public TV
By Public TV
18 minutes ago
Tractor catches fire after touching electric wire while transporting sugarcane leaves jamkhandi
Bagalkot

ಕಬ್ಬಿನ ಹುಲ್ಲು ಸಾಗಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ – ಧಗ ಧಗ ಹೊತ್ತಿ ಉರಿದ ಟ್ರ್ಯಾಕ್ಟರ್‌

Public TV
By Public TV
52 minutes ago
Sunetra Pawar Ajit Pawar
Latest

ಮಹಾರಾಷ್ಟ್ರ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್‌ ಪತ್ನಿ ಸುನೇತ್ರಾ ಹೆಸರು ಪ್ರಸ್ತಾಪಿಸಲು ಎನ್‌ಸಿಪಿ ಚಿಂತನೆ

Public TV
By Public TV
1 hour ago
KJ George 1
Bengaluru City

ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವ ಆಗಿಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ

Public TV
By Public TV
2 hours ago
India EU Trade Deal 1 1
Explainer

PublicTV Explainer: ಭಾರತ-ಇಯು ಡೀಲ್; ಐಷಾರಾಮಿ ಕಾರುಗಳು, ಬಿಯರ್‌, ವೈನ್‌, ಮೆಡಿಸಿನ್‌ – ಯಾವ್ಯಾವುದರ ಬೆಲೆ ಇಳಿಕೆ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?