ಬೆಂಗಳೂರು: ನಮ್ಮನ್ನಗಲಿರುವ ರಾಜಕುಮಾರ ಸ್ಯಾಂಡಲ್‍ವುಡ್‍ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಇಂದು ರಾಜ್ಯದ 650 ಥಿಯೇಟರ್‌ಗಳಲ್ಲಿ ಏಕಕಾಲಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Advertisement
ನಟ ಸೌರ್ವಭಾಮನಿಗೆ ದೀಪಾಂಜಲಿ, ಭಾಷ್ಪಾಂಜಲಿ, ಪುಷ್ಪಾಂಜಲಿ, ಗೀತಾಂಜಲಿ ಸಲ್ಲಿಸಲಾಯಿತು. ಥಿಯೇಟರ್ ಅಂಗಳದಲ್ಲಿ ದೀಪ ಹಚ್ಚುವ ಮೂಲಕ ನಾಗೇಂದ್ರ ಪ್ರಸಾದ್ ಅವರು ರಚಿಸಿ, ಸಂಗೀತ ನೀಡಿರುವ ಅಪ್ಪುವಿಗೆ ನಮನಾಂಜಲಿ ಹೆಸರಿನ ವಿಶೇಷ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
Advertisement
Advertisement
ನಾಗೇಂದ್ರ ಪ್ರಸಾದ್ ಅವರು ರಚಿಸಿ, ಸಂಗೀತ ನೀಡಿರುವ ಈ ವಿಶೇಷ ಹಾಡಿಗೆ ವಿಷ್ಣು ಸುರೇಶ್ ಧ್ವನಿಯಾಗಿದ್ದಾರೆ. ಅಪ್ಪು ನಮನಾಂಜಲಿ ಹಾಡುವ ಮೂಲಕ ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಗೀತಾಂಜಲಿ ಅಪ್ಪು ನಮನಾಂಜಲಿ ಗೀತೆ ಹಾಡಲಾಯಿತು. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’
Advertisement
ನಾಳೆ ಪುನೀತ್ ರಾಜ್‍ಕುಮಾರ್ ನಿಧನರಾಗಿ 11ನೇ ದಿನವಾಗಿದ್ದು, ನಾಳೆ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಕ್ಕೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಬೆಳಗ್ಗೆ 9.45ಕ್ಕೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ನಾಳೆ ಪುನೀತ್ ರಾಜ್‍ಕುಮಾರ್ ಅವರ ಪುಣ್ಯತಿಥಿ. ರಾಘವೇಂದ್ರ ರಾಜ್‍ಕುಮಾರ್ ಅವರ ಹಿರಿ ಮಗ ವಿನಯ್ ರಾಜ್‍ಕುಮಾರ್ ಚಿಕ್ಕಪ್ಪಣ ಪುಣ್ಯ ಕಾರ್ಯ ನೆರವೇರಿಸಲಿದ್ದಾರೆ.