ಬೆಂಗಳೂರು: ಪ್ರೇಯಸಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಬೆಂಕಿ ಹಚ್ಚುವ ಮುನ್ನ ಯುವತಿ ಮನೆಗೆ ತೆರಳಿ ತಂದೆಗೆ ಚಾಕು ಇರಿದಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಈ ಘಟನೆ ಬೆಂಗಳೂರಿನ (Bengaluru) ಸುಬ್ರಮಣ್ಯಪುರದಲ್ಲಿ ನಡೆದಿದ್ದು, ಆರೋಪಿಯನ್ನು ರೌಡಿಶೀಟರ್ ರಾಹುಲ್ ಎಂದು ತಿಳಿಯಲಾಗಿದೆ. ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ 18 ಕೇಸ್‌ಗಳಿವೆ. ಕಳೆದ ಕೆಲವು ತಿಂಗಳುಗಳಿಂದ ಯುವತಿ ಆತನ ಪ್ರೀತಿಯನ್ನು ನಿರಾಕರಿಸುತ್ತಿದ್ದಳು. ಹೀಗಾಗಿ ಭಾನುವಾರ ಸ್ನೇಹಿತರ ಜೊತೆ ಬಂದು ಪ್ರೇಯಸಿಯ ಕಾರುಗಳಿಗೆ ಬೆಂಕಿ ಇಟ್ಟಿದ್ದ.ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
Advertisement
Advertisement
ಪ್ರೇಯಸಿಯನ್ನು ಹುಡುಕಿಕೊಂಡ ಸಿಕೆ ಅಚ್ಚುಕಟ್ಟು ಮನೆಗೆ ಬಂದಿದ್ದಾನೆ. ಅಲ್ಲಿ ಗಲಾಟೆ ಮಾಡಿದ್ದು, ಯುವತಿಯ ಸಾಕು ತಂದೆ ಲಕ್ಷ್ಮೀನಾರಾಯಣ ವಿರೋಧಿಸಿದ್ದಕ್ಕೆ ರೊಚ್ಚಿಗೆದ್ದ ರಾಹುಲ್ ಅವರಿಗೆ ಚಾಕು ಇರಿದಿದ್ದ. ಬಳಿಕ ಅಲ್ಲಿ ಯುವತಿ ಇಲ್ಲದಿರುವುದನ್ನು ತಿಳಿದು ಸುಬ್ರಮಣ್ಯಪುರದ ಚಿಕ್ಕಲಸಂದ್ರ ಅಪಾರ್ಟ್ಮೆಂಟ್‌ಗೆ ತೆರಳಿದ್ದ. ಅಲ್ಲಿ ಅಪಾರ್ಟ್ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ಗೆ ಯುವತಿಯ ಫೋಟೋ ತೋರಿಸಿ ಕಾರು ಯಾವುದು ಎಂದು ತಿಳಿದುಕೊಂಡಿದ್ದಾನೆ. ಕಾರು ಗ್ಲಾಸ್ ಒಡೆದು ಪೆಟ್ರೋಲ್ ಹಾಕಿ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಪಕ್ಕದ ಕಾರಿಗೆ ಬೆಂಕಿ ವ್ಯಾಪಿಸಿತ್ತು.
Advertisement
ಸದ್ಯ ಆರೋಪಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಪ್ರಿಯತಮೆ ತಾಯಿಯಿಂದ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಾಗೂ ವಿರೇಶ್ ಎಂಬುವವರಿಂದ ಕಾರಿಗೆ ಹಾನಿ ಮಾಡಿದ್ದ ಹಿನ್ನೆಲೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ಏನಿದರ ಹಿನ್ನೆಲೆ?
ಕಳೆದ 9 ವರ್ಷಗಳಿಂದ ರಾಹುಲ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ರಾಹುಲ್ ಹನುಮಂತನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಈತನ ಹಿನ್ನೆಲೆ ಗೊತ್ತಿದ್ದರೂ ಕೂಡ ಆತನನ್ನು ಪ್ರೀತಿಸಿದ್ದಳು. ಆದರೆ ಕಳೆದ ಕೆಲ ತಿಂಗಳುಗಳಿಂದ ಯುವತಿ ಪ್ರೀತಿ ನಿರಾಕರಿಸಿದ್ದಳು. ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗದಂತೆ ಎಚ್ಚರಿಕೆ ನೀಡಲು ತನ್ನ ಸಹಚರರನ್ನ ಕೆರದುಕೊಂಡು ಬಂದು ಭಾನುವಾರ ಕೃತ್ಯ ಎಸಗಿದ್ದ.
ರೌಡಿ ರಾಹುಲ್ ಕೊಡಿಸಿದ್ದ ಕಾರು:
ರೌಡಿಶೀಟರ್ ರಾಹುಲ್ ತನ್ನ ಪ್ರೀತಿಯ ಸಂಕೇತವಾಗಿ ಯುವತಿಗೆ ಕೆಲ ವರ್ಷಗಳ ಹಿಂದೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದ ಎಂದು ಹೇಳಲಾಗಿದೆ. ಶನಿವಾರ ತಡರಾತ್ರಿ ಕೂಡ ತಾನು ಕೊಡಿಸಿದ್ದ ಕಾರಿಗೆ ರಾಹುಲ್ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಪ್ರಿಯಕರ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಂತೆ ಗಾಬರಿಗೊಂಡು ಯುವತಿ ಬೆಂಗಳೂರು ತೊರೆದಿದ್ದಾಳೆ. ಹೀಗಾಗಿ ಆಕೆಯನ್ನು ಸಂಪರ್ಕಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆಕೆ ಬಂದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಸಾಲಭಾದೆ ತಾಳಲಾರದೆ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ