ಧಾರವಾಡ: ಧಾರವಾಡದ ಯುವತಿ ಒಬ್ಬಳು ಇಡೀ ಭಾರತವೇ ಹೆಮ್ಮೆ ಪಡುವಂತೆ ತನ್ನ ಆಟ ಪ್ರದರ್ಶಿಸಿ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾಳೆ.
ಧಾರವಾಡದ ಮುಗಳಿ ಗ್ರಾಮದ ಪ್ರಿಯಾಂಕ ಒಲೆಕಾರ್, ಫ್ರಾನ್ಸ್‌ನಲ್ಲಿ ನಡೆದ ರಿಲೇ ಓಟದಲ್ಲಿ ಕಂಚಿನ ಪದಕಕ್ಕೆ ಮತ್ತಿಟ್ಟಿದ್ದಾಳೆ. ಓಟದಲ್ಲೇ ಸದಾ ಮುಂದಿದ್ದ ಪ್ರಿಯಾಂಕ ಹಾಸ್ಟೆಲ್‍ನಲ್ಲಿಯೇ ಇದ್ದು, ವಿದ್ಯಾಭ್ಯಾಸದ ಜೊತೆಗೆ ಆಟದಲ್ಲೂ ಸಹ ಮುಂದಾಗಿದ್ದಳು. ಹೀಗಾಗಿ ಭುವನೇಶ್ವರದಲ್ಲಿ ನಡೆದ ಸೆಲೆಕ್ಷನ್‍ನಲ್ಲಿ ಭಾಗಿಯಾಗಿ ಫ್ರಾನ್ಸ್ ಟಿಕೆಟ್‍ನ್ನು ಖಚಿತಪಡಿಸಿಕೊಂಡಿದ್ದಳು. ಇದನ್ನೂ ಓದಿ: ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?
Advertisement
Advertisement
ಪ್ರಾನ್ಸ್‌ನ ರ್ಮಡಿಯಲ್ಲಿ ನಡೆದ ರಿಲೇ ಸ್ಪರ್ಧೇಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾಳೆ. ಈಕೆಯ ಸಾಧನೆಗೆ ಬೆನ್ನು ತಟ್ಟಿ ಹಿಂದೆ ನಿಂತಿದ್ದು ಈಕೆಯ ಕೋಚ್ ಶ್ಯಾಮಲಾ ಪಾಟೀಲ್. ಭಾರತದ ಟೀಮ್‍ನ ಕೋಚ್ ಆಗಿದ್ದ ಶ್ಯಾಮಲಾ ಫ್ರಾನ್ಸ್‌ನಲ್ಲಿ ಎಲ್ಲ ರೀತಿಯ ಬೆಂಬಲ ನೀಡುವ ಮೂಲಕ ಪ್ರಿಯಾಂಕ ಸಾಧನೆಗೆ ಕೈ ಜೋಡಿಸಿದರು. ಮೂಲತಃ ಸಾರಿಗೆ ನೌಕರನ ಮಗಳಾಗಿರುವ ಪ್ರಿಯಾಂಕ ಇಷ್ಟೊಂದು ಸಾಧನೆ ಮಾಡಿರುವುದು ಇಡೀ ಧಾರವಾಡಕ್ಕೆ ಹೆಮ್ಮೆ ತಂದಿದೆ.
Advertisement
Advertisement
64 ದೇಶಗಳ ಎದುರಿಗೆ ಸಮಬಲ ಹೋರಾಟದ ಮೂಲಕ ಎಲ್ಲರನ್ನು ಹಿಂದಿಕ್ಕಿ 3ನೇಯ ಸ್ಥಾನ ಪಡೆದಿದ್ದು ಧಾರವಾಡಕ್ಕೆ ಖುಷಿಯ ಸಂಗತಿ. ಕರ್ನಾಟಕದ ಇಬ್ಬರು ಹಾಗೂ ತಮಿಳುನಾಡಿನ ಇಬ್ಬರು ಯುವತಿಯರು ಪ್ರಿಯಾಂಕಗೆ ಕೈ ಜೋಡಿಸಿದ್ದು, 300 ಮೀಟರ್ ರಿಲೇಯಲ್ಲಿ ಕಂಚಿನ ಪದಕವನ್ನು ಗೆದ್ದು ಬೀಗಿದ್ದಾರೆ. ಅದರಲ್ಲಿ ಫ್ರಾನ್ಸ್ ಮೊದಲ ಸ್ಥಾನ ಪಡೆದರೆ, ಚೀನಾ ಎರಡನೇ ಸ್ಥಾನ ಹಾಗೂ ಭಾರತಕ್ಕೆ 3ನೇಯ ಸ್ಥಾನ ದಕ್ಕಿದೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ
ಒಟ್ಟಾರೆ ಎರಡು ವರ್ಷಗಳಿಂದ ಕೋವಿಡ್ ನೆಪವನ್ನು ಹೇಳುತ್ತಲೇ ಸರ್ಕಾರ ಯಾವುದೇ ಸಹಾಯವನ್ನು ಈ ಯುವ ಅಥ್ಲೆಟಿಕ್ಸ್‌ಗಳಿಗೆ ನೀಡಿಲ್ಲ. ಆದರೂ ಸಹ ಜನರ ಸಹಾಯದಿಂದ ಹಾಗೂ ಸಾಲಸೋಲ ಮಾಡಿಕೊಂಡು ಸಾಧನೆ ಮಾಡಿದ್ದು ನಿಜಕ್ಕೂ ಯುವತಿಯ ಸಾಧನೆಗೆ ನಮ್ಮದೊಂದು ಸಲಾಂ.