ಹಾವೇರಿ: ಆಕಳು (Cow) ಮೈ ತೊಳೆಯಲು ಹೋಗಿದ್ದ ವೇಳೆ ಯುವಕನೋರ್ವ ವರದಾ ನದಿಯಲ್ಲಿ (River) ನೀರು ಪಾಲಾದ ಘಟನೆ ಹಾವೇರಿ (Haveri) ತಾಲೂಕಿನ ಹಂದಿಗನೂರು (Handiganur) ಗ್ರಾಮದ ಬಳಿ ನಡೆದಿದೆ.
ನೀರು ಪಾಲಾದ ಯುವಕನನ್ನು ಗಾಳೆಪ್ಪ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ಗಾಳೆಪ್ಪ ಆಕಳು ಮೇಯಿಸಿಕೊಂಡು ನಂತರ ಆಕಳಿನ ಮೈ ತೊಳೆಯಲು ನದಿಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಗ್ಯಾರಂಟಿಗೆ 65 ಸಾವಿರ ಕೋಟಿ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ – ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ
Advertisement
Advertisement
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೀರು ಪಾಲಾದ ಗಾಳೆಪ್ಪನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: Champions Trophy 2025: ಭಾರತ ಕ್ರಿಕೆಟ್ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್ ನಿರ್ಧಾರ!
Advertisement
Advertisement
ಘಟನಾ ಸ್ಥಳದಲ್ಲಿ ಗಾಳೆಪ್ಪನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್ – ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ