ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ ಘಟನೆ ತಡವಾಗಿ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪೂರ ನಿವಾಸಿಗಳಾದ ಪರಶುರಾಮ್ ಮತ್ತು ಸ್ವರೂಪಾರಾಣಿ ದಂಪತಿಯನ್ನ ಕಳೆದ ಎರಡು ತಿಂಗಳನಿಂದ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರ ಹಾಕಿದ್ದರಿಂದ ದಂಪತಿ ಸದ್ಯ ಗಂಗಾವತಿ ಪಟ್ಟಣದಲ್ಲಿ ವಾಸವಾಗಿದ್ದಾರೆ.
ಪರಶುರಾಮ ಮತ್ತು ಸ್ವರೂಪಾರಾಣಿ ಹಲವು ವರ್ಷಗಳಿಂದ ಒಬ್ಬರನೊಬ್ಬರನ್ನು ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಇಬ್ಬರೂ ಮದುವೆಯನ್ನು ಮಾಡಿಕೊಂಡಿದ್ದಾರೆ. ಇಬ್ಬರ ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ, ನಿಮ್ಮನ್ನು ನೋಡಿ ಗ್ರಾಮದ ಮಕ್ಕಳು ಇದೇ ರೀತಿ ಅನುಸರಿಸುತ್ತಾರೆ ಎಂದು ಕಡ್ಡಿರಾಂಪೂರ ಗ್ರಾಮಸ್ಥರು ನವಜೋಡಿಗೆ ಬಹಿಷ್ಕಾರ ಹಾಕಿದ್ದಾರೆ.
ಇಬ್ಬರ ಕುಟುಂಬಗಳು ಇವರಿಬ್ಬರ ಮದುವೆಗೆ ಸಮ್ಮತಿಸಿದರೂ ಗ್ರಾಮಸ್ಥರು ಮಾತ್ರ ತಗಾದೆ ತೆಗೆದು ಊರಲ್ಲಿ ಬರಲು ಬಿಡುತ್ತಿಲ್ಲ. ಈ ಬಗ್ಗೆ ಬಹಿಷ್ಕಾರಕ್ಕೊಳಗಾದ ದಂಪತಿ ಹಂಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೇ ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧೀಕಾರಿಗಳ ಗಮನಕ್ಕೆ ತಂದ್ರು ಸಹ ಯಾವುದೇ ರಕ್ಷಣೆ ಸಿಕ್ಕಿಲ್ಲ ಎಂದು ಸ್ವರೂಪಾರಾಣಿ ಮತ್ತು ಪರಶುರಾಮ್ ಆರೋಪಿಸುತ್ತಿದ್ದಾರೆ.