ಮಂಗಳೂರು: ವಿದ್ಯಾರ್ಥಿಯೊಬ್ಬ ಸಹಪಾಠಿ ವಿದ್ಯಾರ್ಥಿನಿ ಜೊತೆ ಪಬ್ಲಿಕ್ ಟಾಯ್ಲೆಟ್ ಒಳಗೆ ಸರಸವಾಡುತ್ತಿದ್ದಾಗ ಸಿಕ್ಕಿಬಿದ್ದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೇಟೆಯಲ್ಲಿ ನಡೆದಿದೆ.
Advertisement
ಸಾರ್ವಜನಿಕರು ವಿಚಾರ ಅರಿತು ಬಾಗಿಲು ತಟ್ಟಿದಾಗ ವಿದ್ಯಾರ್ಥಿ ಹೊರಬಂದಿದ್ದಾನೆ. ಆ ಬಳಿಕ ಮುಖಕ್ಕೆ ಬಟ್ಟೆ ಹಾಕಿಕೊಂಡಿದ್ದ ವಿದ್ಯಾರ್ಥಿನಿಯೂ ಹೊರಬಂದಿದ್ದು ನೇರವಾಗಿ ಓಡಿ ಪರಾರಿಯಾಗಿದ್ದಾಳೆ. ಇಬ್ರೂ ಸಾರ್ವಜನಿಕರ ಕೈಗೆ ಸಿಕ್ಕಿರುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
Advertisement
ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇಬ್ಬರೂ ವಿದ್ಯಾರ್ಥಿಗಳು ಸ್ಥಳೀಯ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.