ಹಾಸನ: ಪತ್ನಿಯನ್ನು ಕೊಲೆಗೈದು ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿ ದೂರು ದಾಖಲಿಸಿದ್ದ ಪತಿಯ ನಾಟಕ ಬಯಲಾದ ಘಟನೆ ಸಕಲೇಶಪುರದ (Sakleshpura) ಬಾಗೆ ಗ್ರಾಮದಲ್ಲಿ ನಡೆದಿದೆ.
ಸುಮಾರು ಎರಡೂವರೆ ತಿಂಗಳ ಶಾಂತಿವಾಸು (29) ಎಂಬ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈಗ ಮನೆಯ ಪಕ್ಕದ ಗುಂಡಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ನಾಯಿಗಳು ಆಕೆಯ ಮೂಳೆಗಳನ್ನು ಮಣ್ಣಿನಿಂದ ತೆಗೆದ ಮೇಲೆ ಈ ಪ್ರಕರಣ ಬಯಲಾಗಿದೆ. ಆಕೆಯ ಪತಿ ಪವನ್ ಕುಮಾರನೇ ಪತ್ನಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳದಲ್ಲಿ ಸಂಧಾನಕ್ಕೆ ಬಂದು 2 ಲಕ್ಷ ನೀಡುವಂತೆ ಪೊಲೀಸ್ರು ತಾಕೀತು; ನಿಖಿಲ್ ಆತ್ಮಹತ್ಯೆ
ಪವನ್ ಕುಮಾರ್ ಹಾಗೂ ಶಾಂತಿವಾಸು ಪ್ರೀತಿಸಿ ಮದುವೆಯಾಗಿದ್ದರು. ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದೇ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪತ್ನಿ ಸಾವಿಗೀಡಾಗಿದ್ದಾಳೆ. ಬಳಿಕ ಆಕೆಯನ್ನು ಮನೆಯ ಪಕ್ಕದಲ್ಲಿ ಗುಂಡಿ ತೆಗೆದು ಮುಚ್ಚಿದ್ದ. ಅಲ್ಲದೇ ಇದಾದ ಬಳಿಕ ಮನೆ ತೊರೆದು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಕಲೇಶಪುರ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]