ಚಾಮರಾಜನಗರ: ನೀವೂ ಹಣ ಕದಿಯೋರನ್ನಾ, ಚಿನ್ನ ಕದಿಯೋರನ್ನ ನೋಡಿರುತ್ತಿರಾ ಆದರೆ ಮೆಡಿಸನ್ ಕದಿಯೋರನ್ನಾ ನೋಡಿದ್ದೀರಾ. ಜಿಲ್ಲೆಯಲ್ಲಿ ನವಂಬರ್ 12ರಂದು ಖಾಸಗಿ ವೈದ್ಯರು ಮುಷ್ಕರದ ದಿನದಂತೆ ಮಹಿಳೆಯೊಬ್ಬರು ಥೈರಾಯಿಡ್ ಗೆ ಸಂಬಂಧಿಸಿದಂತಹ ಮಾತ್ರೆ ಡಬ್ಬವನ್ನು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಚಾಮರಾಜನಗರ ಜಿಲ್ಲಾಸ್ಪತ್ರೆಯ ಎದುರಿಗೆ ಇರುವ ಸುರಕ್ಷಾ ಮೆಡಿಕಲ್ ನಲ್ಲಿ ಥೈರಾಯಿಡ್ ಗೆ ಸಂಬಂಧಿಸಿದ 150 ರೂ. ಮೌಲ್ಯದ ಔಷಧಿಯನ್ನು ಕೊಳ್ಳಲು ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಬಂದಿದ್ದಾರೆ. ಈ ವೇಳೆ ಮಹಿಳೆ ನನಗೆ ಈ ಔಷಧಿ ಬೇಡ ಆ ಔಷಧಿ ಕೊಡಿ ಎಂದು ಮೆಡಿಕಲ್ ಶಾಪ್ ಸಿಬ್ಬಂದಿ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
Advertisement
ಈ ವೇಳೆ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಔಷಧಿಯ ಬಾಟಲಿಯನ್ನು ತನ್ನ ಮಗಳ ಕೈಗೆ ಕೊಟ್ಟಿದ್ದಾರೆ. ನಂತರ ನನಗೆ ಔಷಧಿ ಬೇಡ ಎಂದು ಆ ಮಹಿಳೆ ಹೊರಟು ಹೋಗಿದ್ದಾರೆ.
Advertisement
ಸರ್ಕಾರಿ ಆಸ್ಪತ್ರೆಯಲ್ಲಿರುವ ಜನರಿಕ್ ಔಷಧಿ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತಿತ್ತು. ಆದರೆ ಅಲ್ಲಿ ಅಗತ್ಯವಿರುವ ಔಷಧಿಗಳು ಸಿಗುತ್ತಿಲ್ಲ, ಇದರಿಂದ ಮಹಿಳೆ ಹಣವಿಲ್ಲದೇ ಔಷಧಿಯನ್ನು ಕದಿಯುವ ಪ್ರಸಂಗ ಎದುರಾಗಿದೆ ಎನ್ನಲಾಗಿದೆ.