ಬೆಂಗಳೂರು: ಮಹಿಳೆಯೊಬ್ಬಳು ತನ್ನ ಸ್ನೇಹಿತನ ಮೇಲೆ ನಂಬಿಕೆಯಿಟ್ಟು ಮೊಬೈಲ್ ಕೊಟ್ಟಿದ್ದಕ್ಕೆ, ಆಕೆಯ ಮೊಬೈಲ್‌ನಿಂದಲೇ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿ, ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನ (Bengaluru) ಆರ್.ಆರ್ ನಗರ ಪೊಲೀಸ್ ಠಾಣಾ (RR Nagar Police Station) ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಸಂಜಯ್ ಎಂಬಾತನ ವಿರುದ್ಧ ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಖತರ್ನಾಕ್ ಕೃತ್ಯ ಎಸಗಿದ್ದು ಹೇಗೆ?
ಪಟ್ಟಗೇರೆಪಾಳ್ಯದಲ್ಲಿರುವ ಖಾಸಗಿ ಕಂಪನಿಯಲ್ಲಿ (Private Company) ಕೆಲಸ ಮಾಡ್ತಿದ್ದ ಸಂತ್ರಸ್ತ ಮಹಿಳೆಯು ತನ್ನ ಸಹೋದ್ಯೋಗಿ ಮತ್ತು ಆರೋಪಿ ಸಂಜಯ್ ಮೂವರು ಆಗಾಗ್ಗೆ ಔಟಿಂಗ್ ಹೋಗುತ್ತಿದ್ದರು. ಈ ವೇಳೆ ಸಂಜಯ್ ಜೊತೆಗೆ ಸ್ವಲ್ಪ ಸಲುಗೆಯೂ ಬೆಳೆದಿತ್ತು. ಆಗ ಮಹಿಳೆ ತನ್ನ ಮೊಬೈಲನ್ನ ಸಂಜಯ್‌ಗೆ ಕೊಟ್ಟಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿರಾತಕ ಸಂಜಯ್ ಆಕೆಗೆ ಗೊತ್ತಾಗದಂತೆ ಮೊಬೈಲ್ ನಲ್ಲಿ ಆ್ಯಪ್‌ವೊಂದನ್ನ (Mobile App) ಡೌನ್‌ಲೋಡ್ ಮಾಡಿಟ್ಟಿದ್ದಾನೆ. ಇದನ್ನೂ ಓದಿ: ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ
ನಂತರ ಆ್ಯಪ್ ಮೂಲಕ ಮಹಿಳೆಯ ಫೋನನ್ನು ತನ್ನ ಮೊಬೈಲ್‌ನಿಂದ ಆಪರೇಟ್ ಮಾಡೋಕೆ ಶುರು ಮಾಡಿದ್ದಾನೆ. ಹೀಗೆ ಒಂದು ದಿನ ಮಹಿಳೆ ಸ್ನಾನಕ್ಕೆ ಮೊಬೈಲ್ ತೆಗೆದುಕೊಂಡು ಹೋದಾಗ, ಈತ ತನ್ನ ಮೊಬೈಲ್ ಬಳಸಿ ಆಕೆಯ ಮೊಬೈಲ್‌ನಲ್ಲಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಆ ಬೆತ್ತಲೆ ವಿಡಿಯೋ ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡೋಕೆ ಶುರು ಮಾಡಿದ್ದಾನೆ. ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ
ಮಹಿಳೆಗೆ ವೀಡಿಯೋ ಕಳುಹಿಸಿ ಆ ವೀಡಿಯೋ ನಿನ್ನ ಕಂಪನಿಯ ಗೆಳೆಯ ನನಗೆ ಕಳುಹಿಸಿದ್ದು ಅಂತ ಕಥೆ ಕಟ್ಟಿದ್ದಾನೆ. ಇದರಿಂದ ಅನುಮಾನಗೊಂಡು ಸಂಜಯ್ ಮೊಬೈಲ್ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಯುವಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!