ಬೆಂಗಳೂರು: ಸಿನಿಮಾ ನೋಡಿಕೊಂಡು ಬರುತ್ತಿದ್ದ ನವದಂಪತಿಯ ಆಕ್ಟೀವ್ ಹೋಂಡಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಸ್ಥಿತಿ ಗಂಭಿರವಾಗಿದೆ.
ಮೃತ ನವವಧುವನ್ನು ಶ್ವೇತಾ (23) ಎಂದು ಗುರುತಿಸಲಾಗಿದ್ದು, ಪತಿ ಆನಂದ್ (28) ಸ್ಥಿತಿ ಗಂಭೀರವಾಗಿದೆ. ನಗರದ ಕಲ್ಯಾಣನಗರದ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಈ ನವಜೋಡಿ, ತಡರಾತ್ರಿ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿದ ನಂತರ ಮನೆಗೆ ವಾಪಸ್ಸಾಗುವ ವೇಳೆ ಆಕ್ಟೀವ್ ಹೋಂಡಾಗೆ ಲಾರಿ ಡಿಕ್ಕಿ ಹೊಡೆದೆದ್ದು, ಬೈಕ್ ಹಿಂಬದಿ ಕುಳಿತಿದ್ದ ಶ್ವೇತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್ಗೆ ಕರೆ
ಇದೀಗ ಶ್ವೇತಾಳ ಶವ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹೆಚ್ಬಿಆರ್ ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಆನಂದ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ