ಚಾಮರಾಜನಗರ: ಇಲ್ಲಿನ ತಮ್ಮಡಹಳ್ಳಿಯಲ್ಲಿ ಮಹಿಳೆಯೊಬ್ಬರು ಭಾವೋದ್ವೇಗಕ್ಕೆ ಒಳಗಾಗಿರುವ ಪ್ರಸಂಗ ಚಾಮರಾಜನಗರದಲ್ಲಿ (Chamarajanagara) ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಯಲ್ಲಿ ಸ್ಥಗಿತಗೊಂಡ ಗುಜ್ಜಮ್ಮತಾಯಿ ಕೊಂಡೋತ್ಸವ ಸ್ಥಗಿತಗೊಂಡ ಬೆನ್ನಲ್ಲೇ ತನ್ನ ಮೇಲೆ ಗುಜ್ಜಮ್ಮತಾಯಿ ದೇವರು ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಮಹಿಳೆ ಊರಿನ ಜನಕ್ಕೆ ಶಾಪ ಹಾಕಿದ್ದಾರೆ. ಈ ಮಹಿಳೆ ಕೊಂಡ ಹಾಯಲು ಮೂರು ದಿನ ಉಪವಾಸ ಇದ್ದರು ಎಂದೂ ಸಹ ಹೇಳಲಾಗಿದೆ. ಇದನ್ನೂ ಓದಿ: ಡಿಕೆಶಿ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿಲ್ಲ, ತಿದ್ದುಪಡಿ ಬಗ್ಗೆ ಮಾತಾಡಿರೋದು: ಪ್ರಿಯಾಂಕ್ ಖರ್ಗೆ
ನನ್ನ ಕೊಂಡ, ನನ್ನ ಜಾತ್ರೆ, ನನ್ನ ಕನ್ನಡಿ ಎಲ್ಲವನ್ನು ನಿಲ್ಲಿಸಿ ಮೋಸ ಮಾಡಿದ್ದಾರೆ. ನನ್ನ ಜಾತ್ರೆ ನಿಲ್ಸಿದ್ದೀರಿ… ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ.. ಎಂದು ಪೊಲೀಸರ ಮುಂದೆಯೇ ಮಹಿಳೆ ಶಾಪಾ ಹಾಕಿದ್ದಾರೆ. ಈ ಕುರಿತ ವಿಡಿಯೋ ತುಣುಕು ಹರಿದಾಡುತ್ತಿದೆ. ಇದನ್ನೂ ಓದಿ: ಕ್ಯಾಂಟರ್-ಕಾರು ಮುಖಾಮುಖಿ ಡಿಕ್ಕಿ – ಒಂದೇ ಕುಟುಂಬದ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ